September 5, 2026
Saturday, September 5, 2026
spot_img

ನಕಲಿ ದಾಖಲೆ ಕೊಟ್ಟು ಸಿಕ್ಕಿಬಿದ್ರು: 65 ಕ್ರಿಕೆಟಿಗರ ಕ್ರಿಕೆಟ್‌ ಭವಿಷ್ಯಕ್ಕೆ ಬ್ರೇಕ್ ಹಾಕಿದ ಬಿಸಿಸಿಐ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಮೋಸ ನಡೆಯದ ಜಾಗವೇ ಇಲ್ಲ ಅನ್ಸುತ್ತೆ. ಮಾರ್ಕೆಟ್, ಆಸ್ಪತ್ರೆ, ಸಿನಿಮಾ ಹಾಲ್, ಕೊನೆಗೆ ಈಗ ಕ್ರಿಕೆಟ್ ನ್ನು ಕೂಡ ಬಿಟ್ಟಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ನಕಲಿ ದಾಖಲೆ ಕೊಟ್ಟು ನೋಂದಾಯಿತರಾಗಿದ್ದ 65 ಆಟಗಾರರಿಗೆ ಬಿಸಿಸಿಐ ಎರಡು ವರ್ಷ ಬ್ಯಾನ್ ಶಿಕ್ಷೆ ನೀಡಿದೆ.

ವಿಶ್ವಕಪ್ ವಿಜೇತನಿಂದಲೂ ನಕಲಿ ದಾಖಲೆ

ಬಂಗಾಳ ಕ್ರಿಕೆಟ್ ಸಂಸ್ಥೆಯ ದಾಖಲೆಗಳ ಪ್ರಕಾರ, 2022ರ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ವೇಗದ ಬೌಲರ್ ರವಿ ಕುಮಾರ್ ಮತ್ತು ಲೆಗ್‌ ಸ್ಪಿನ್ನರ್ ರೋಹಿತ್ ಯಾದವ್ ಕೂಡ ಸೇರಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರವಿ ಕುಮಾರ್ 4 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ:

ರವಿ ಕುಮಾರ್ ಅವರ ಜನನ ಪ್ರಮಾಣಪತ್ರದಲ್ಲಿ 45 ತಿಂಗಳ ವ್ಯತ್ಯಾಸ ಪತ್ತೆಯಾಗಿದೆ. ಹೀಗಾಗಿ 2021-22ರಿಂದ 2025-26ರವರೆಗಿನ ಅವರ ಅಂಡರ್-19, ಅಂಡರ್-23 ಹಾಗೂ ಹಿರಿಯರ ತಂಡದ ಭಾಗವಹಿಸುವಿಕೆ ದಾಖಲೆಗಳನ್ನು ಅಮಾನ್ಯಗೊಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !