ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದ್ವಾರಗಳು ಹಾಗೂ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ.
ವಿಮಾನ ನಿಲ್ದಾಣದ ಎಂಟ್ರಿ ಹಾಗೂ ಎಕ್ಸಿಟ್ನಲ್ಲಿ ಮಳೆ ನಿಂತಿರುವ ಕಾರಣ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಕಿರಿಕಿರಿಯಾಗಿದೆ. ಪ್ರಯಾಣಿಕರು ತಮ್ಮ ಟ್ರಾಲಿಗಳನ್ನು ತಳ್ಳಿಕೊಂಡು, ಬಟ್ಟೆಗಳನ್ನು ಒದ್ದೆ ಮಾಡಿಕೊಂಡು ಮುಂದಕ್ಕೆ ಹೋಗುವುದು ಅನಿವಾರ್ಯವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಏರ್ಪೋರ್ಟ್ನ ವಿಡಿಯೋಗಳು ವೈರಲ್ ಆಗಿದ್ದು, ಪ್ರಯಾಣಿಕರು ಸೇಫ್ ಆಗಿ ಮನೆ ಸೇರಿಕೊಂಡ್ರೆ ಸಾಕು ಅಂತಿದ್ದಾರೆ. ಈ ಬಗ್ಗೆ ಪ್ರಯಾಣಿಕರೊಬ್ಬರು ಮಾತನಾಡಿ, ಈ ರೀತಿ ಏರ್ಪೋರ್ಟ್ ನೀರಿನಿಂದ ತುಂಬಿದ್ದನ್ನು ನಾವು ಹಿಂದೆಂದೂ ನೋಡಿಲ್ಲ. ತುಂಬಾ ನೀರು ನಿಂತಿದೆ, ಈಜಾಡೋದು ಬಾಕಿ ಅಷ್ಟೆ ಎಂದಿದ್ದಾರೆ.ಈ ರೀತಿ ಏರ್ಪೋರ್ಟ್ನಲ್ಲಿ ನೀರಿನಿಂದ ತುಂಬಿರುವುದನ್ನು ನೋಡಿಯೇ ಇಲ್ಲ. ಎಷ್ಟೊಂದು ನೀರಿದೆ. ಸುಮಾರು ಅರ್ಧ ಗಂಟೆಯಿಂದ ನಿಂತಿದ್ದೇನೆ. ಸ್ವಲ್ಪವಾದ್ರೂ ನೀರು ಕಡಿಮೆಯಾಗುತ್ತದೆ ಎಂದು ಕಾಯುತ್ತಿದ್ದೇನೆ ಆದರೆ ಆಗುತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಏರ್ಪೋರ್ಟ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಗೋವಿಂದ ಪಾಂಡೆ ಮಾತನಾಡಿದ್ದು, ದೆಹಲಿಯಲ್ಲಿ ಮಳೆ ಬಂದಿದೆ ಆದರೆ ಏರ್ಪೋರ್ಟ್ನಲ್ಲಿ ಮೊಣಕಾಲಿನಷ್ಟು ನೀರು ಬಂದಿರೋದು ಇದೇ ಮೊದಲು. ಸೀವರ್ ಏನಾದ್ರೂ ಬ್ಲಾಕ್ ಆಗಿರಬಹುದು. ಈಗೆಲ್ಲಾ ಸೋಶಿಯಲ್ ಮೀಡಿಯಾ ಝಮಾನಾ, ಪ್ರತಿಯೊಬ್ಬರೂ ವಿಡಿಯೋ ಮಾಡ್ತಾರೆ ಅಪ್ಲೋಡ್ ಮಾಡ್ತಾರೆ. ಇದು ನಮ್ಮ ಏರ್ಪೋರ್ಟ್ ಇಮೇಜ್ ಹಾಳುಮಾಡುತ್ತದೆ. ಸರ್ಕಾರ ಸ್ವಲ್ಪ ಈ ಕಡೆ ತಿರುಗು ನೋಡ್ಬೇಕು. ಮತ್ತೆ ನೀರು ನುಗ್ಗದ ಹಾಗೆ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.



