September 6, 2026
Sunday, September 6, 2026
spot_img

ಸಂಬಳ ಇಲ್ಲ, ಊಟಕ್ಕೂ ಗತಿಯಿಲ್ಲ! ಮ್ಯಾಕ್‌ಡೊನಾಲ್ಡ್ಸ್ ಆಫಿಷಿಯಲ್ ‘X’ ಪೇಜ್ ಹ್ಯಾಕ್ ಆಯ್ತಾ?

ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಚಿತ್ರ ಸುದ್ದಿ ವೈರಲ್ ಆಗ್ತಿರುತ್ತೆ.. ಆದ್ರೆ, ದಿನವೂ ಬರ್ಗರ್, ಆಫರ್ ಎಂದು ಜಾಹೀರಾತು ಹಾಕ್ತಿದ್ದ ಮೆಕ್‌ಡೊನಾಲ್ಡ್ಸ್ ಇಂಡಿಯಾ ಅಧಿಕೃತ X ಖಾತೆಯಲ್ಲಿ ಇದ್ದಕ್ಕಿದ್ದಂತೆ ವಿಚಿತ್ರವಾದ ಪೋಸ್ಟ್ ಒಂದು ಪ್ರತ್ಯಕ್ಷವಾಯ್ತು. ಅದನ್ನು ನೋಡಿ ನೆಟ್ಟಿಗರೆಲ್ಲ ಶಾಕ್!

ಅಷ್ಟಕ್ಕೂ ಆ ಪೋಸ್ಟ್‌ನಲ್ಲಿ ಏನಿತ್ತು ಗೊತ್ತಾ?

ಯಾರೋ ಒಬ್ಬ ವ್ಯಕ್ತಿ ತಾನು ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಇಂಟರ್ನ್ ಆಗಿ ಕೆಲಸ ಮಾಡ್ತಿದ್ದೀನಿ ಎಂದು ಬರೆದುಕೊಂಡಿದ್ದ. “ನಮ್ಮ ಮ್ಯಾನೇಜರ್ ಅಮಿತ್ ಜೋಶಿ ನನಗೆ ಡಿಸೆಂಬರ್ 2025 ರಿಂದ ಸಂಬಳನೇ ಕೊಟ್ಟಿಲ್ಲ. ನಾನು ಹೊಟ್ಟೆಪಾಡಿಗಾಗಿ ಡೆಲಿವರಿ ಮತ್ತೆ ಕಸ್ಟಮರ್ ಸಪೋರ್ಟ್ ಎಂದು ಇನ್ನೆರಡು ಕೆಲಸ ಮಾಡ್ತಿದ್ದೀನಿ. ಬಂದ ಸ್ವಲ್ಪ ದುಡ್ಡನ್ನ ‘ಮೆಮೆ ಕಾಯಿನ್’ ಟ್ರೇಡಿಂಗ್‌ನಲ್ಲಿ ಹಾಕಿ ಲಾಸ್ ಮಾಡ್ಕೊಂಡು ಪ್ರತಿದಿನ ಹಸಿವಿನಿಂದ ಸಾಯ್ತಿದ್ದೀನಿ. ಸುಮಾರು 60,000 ಸ್ಟೈಪಂಡ್ ಬಾಕಿ ಇದೆ. ಅದಕ್ಕೆ ಆಫಿಷಿಯಲ್ ಅಕೌಂಟ್‌ನಲ್ಲೇ ಪೋಸ್ಟ್ ಹಾಕಿ ಜನಗಳ ಸಪೋರ್ಟ್ ಕೇಳ್ತಿದ್ದೀನಿ” ಎಂದು ಬಾಂಬ್ ಸಿಡಿಸಿದ್ದ.

ಹ್ಯಾಕರ್ಸ್ ಕೈಚಳಕನಾ?

ಈ ಪೋಸ್ಟ್ ಬಂದ ತಕ್ಷಣ ಇಂಟರ್ನೆಟ್‌ನಲ್ಲಿ ವೈರಲ್ ಆಯ್ತು. ಜನರೆಲ್ಲ “ಅಯ್ಯೋ ಪಾಪ, ಆ ಇಂಟರ್ನ್‌ಗೆ ಸಂಬಳ ಕೊಡ್ರಪ್ಪ”, “ಅಮಿತ್ ಜೋಶಿ ಸಾಹೇಬ್ರೇ, ನಿಮಗಿದು ನ್ಯಾಯನಾ?” ಎಂದು ಕಾಮೆಂಟ್ ಹಾಕೋಕೆ ಶುರು ಮಾಡಿದ್ರು. ಇನ್ನು ಕೆಲವರು “ಕಂಪನಿ ಅಕೌಂಟ್ ಹ್ಯಾಕ್ ಆಗಿದೆ, ಇದು ಯಾವುದೋ ಮೆಮೆ ಕಾಯಿನ್ ಪ್ರಮೋಷನ್ ಡ್ರಾಮಾ” ಎಂದು ಅನುಮಾನ ವ್ಯಕ್ತಪಡಿಸಿದ್ರು.

ಕಂಪನಿ ಕೊಟ್ಟ ಟ್ವಿಸ್ಟ್ ಏನು?

ವಿಷಯ ಕೈಮೀರಿ ಹೋಗ್ತಿದ್ದಂತೆ ಮೆಕ್‌ಡೊನಾಲ್ಡ್ಸ್ ಟೀಮ್ ಎಚ್ಚೆತ್ತುಕೊಂಡು ಆ ಪೋಸ್ಟ್ ಅನ್ನು ಡಿಲೀಟ್ ಮಾಡಿತು. ಆದ್ರೆ ಅಷ್ಟರಲ್ಲಾಗಲೇ ಅದರ ಸ್ಕ್ರೀನ್‌ಶಾಟ್‌ಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿತ್ತು.

ಘಟನೆ ನಡೆದ ಮೇಲೆ ಕಂಪನಿ ಕಡೆಯಿಂದ ಬಂದ ಪ್ರತಿಕ್ರಿಯೆ ಮತ್ತಷ್ಟು ತಮಾಷೆಯಾಗಿತ್ತು. ಕೈಯಲ್ಲಿ ಫೋನ್ ಹಿಡಿದು ಅಳ್ತಿರೋ ನಾಯಿ ಫೋಟೋ ಹಾಕಿದ ಮೆಕ್‌ಡೊನಾಲ್ಡ್ಸ್, “ಅಯ್ಯೋ ದೇವ್ರೇ… ನಾವು ದಿನಾ ಹಾಕೋ ಒರಿಜಿನಲ್ ಪೋಸ್ಟ್‌ಗಳು ಈ ರೇಂಜ್‌ಗೆ ವೈರಲ್ ಆಗಿದ್ರೆ ಎಷ್ಟು ಚನ್ನಾಗಿರ್ತಿತ್ತು!” ಎಂದು ತಮಾಷೆಯಾಗಿ ಬರೆದುಕೊಂಡಿದೆ. ಜೊತೆಗೆ #fakenews ಮತ್ತು #memecoin ಅನ್ನೋ ಹ್ಯಾಶ್‌ಟ್ಯಾಗ್ ಬಳಸಿ, ಇದು ನಕಲಿ ಸುದ್ದಿ ಮತ್ತು ಖಾತೆ ಹ್ಯಾಕ್ ಆಗಿತ್ತು ಅನ್ನೋದನ್ನು ತಿಳಿಸಿದೆ.

ಒಟ್ಟಿನಲ್ಲಿ, ನಿಜವಾಗಿಯೂ ಇಂಟರ್ನ್ ಒಬ್ಬ ಬಾಸ್ ವಿರುದ್ಧ ತಿರುಗಿಬಿದ್ದಿದ್ದಾನೋ ಅಥವಾ ಯಾವುದೋ ಹ್ಯಾಕರ್ ಅಕೌಂಟ್ ಹ್ಯಾಕ್ ಮಾಡಿ ಮಜಾ ತಗೊಂಡಿದ್ದಾನೋ ಗೊತ್ತಿಲ್ಲ, ಆದ್ರೆ ಭಾನುವಾರದ ದಿನ ಸೋಶಿಯಲ್ ಮೀಡಿಯಾ ಮಂದಿಗಂತೂ ಒಳ್ಳೆ ಎಂಟರ್‌ಟೈನ್‌ಮೆಂಟ್ ಸಿಕ್ಕಿದ್ದಂತೂ ನಿಜ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !