ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ‘ಮಿರ್ಜಾಪುರ: ದಿ ಮೂವಿ’ ಭರ್ಜರಿ ಓಟ ಮುಂದುವರೆಸಿದೆ. ಬಿಡುಗಡೆಯಾಗಿ ಕೇವಲ ನಾಲ್ಕೇ ದಿನಗಳಲ್ಲಿ ಭಾರತದಲ್ಲಿ 100 ಕೋಟಿ ರೂ ನೆಟ್ ಕಲೆಕ್ಷನ್ ಗಡಿ ದಾಟಿದೆ.
ಸೆಪ್ಟೆಂಬರ್ 4ರಂದು ಬಿಡುಗಡೆಯಾಗಿರೋ ಈ ಸಿನಿಮಾ ಮೊದಲ ದಿನವೇ 25.75 ಕೋಟಿ ರೂ ಗಳಿಸಿತ್ತು. ವ್ಯಾಪಾರ ವಿಶ್ಲೇಷಕರು ಅಂದಾಜಿಸಿದ್ದ 18–20 ಕೋಟಿಗಿಂತಲೂ ಹೆಚ್ಚಿನ ಆರಂಭಿಕ ಕಲೆಕ್ಷನ್ ದಾಖಲಿಸೋ ಮೂಲಕ ‘ಮಿರ್ಜಾಪುರ: ದಿ ಮೂವಿ’ ಗಮನ ಸೆಳೆದಿತ್ತು.
ಇದನ್ನೂ ಓದಿ:
ಶನಿವಾರ 32 ಕೋಟಿ ರೂ ಹಾಗೂ ಭಾನುವಾರ 36 ಕೋಟಿ ರೂ ಕಲೆಕ್ಷನ್ ಮಾಡಿದೆ. ಸೋಮವಾರ15.50 ಕೋಟಿ ರೂ ಗಳಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಒಟ್ಟು ಮೊತ್ತ 109.25 ಕೋಟಿ ರೂ ತಲುಪಿದೆ.
ಪಂಕಜ್ ತ್ರಿಪಾಠಿ, ಅಲಿ ಫಜಲ್ ಸೇರಿದಂತೆ ತಾರಾಗಣ ಹೊಂದಿರುವ, ಗುರ್ಮೀತ್ ಸಿಂಗ್ ನಿರ್ದೇಶನದ, ರಿತೇಶ್ ಸಿಧ್ವಾನಿ ಹಾಗೂ ಫರ್ಹಾನ್ ಅಖ್ತರ್ ನಿರ್ಮಿಸಿದ ಈ ಸಿನಿಮಾ ಬ್ಲಾಕ್‌ಬಸ್ಟರ್ ಪಟ್ಟಿಯತ್ತ ವೇಗವಾಗಿ ಸಾಗುತ್ತಿದೆ.



