September 8, 2026
Tuesday, September 8, 2026
spot_img

ಟ್ರಾಲಿ ಬ್ಯಾಗ್ ತೆರೆದ DRI ಅಧಿಕಾರಿಗಳಿಗೆ ಶಾಕ್: ಒಳಗಿದ್ದದ್ದು 180 ಜೀವಂತ ಸ್ಟಾರ್ ಆಮೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ನಾವು ನೀವೆಲ್ಲ ಬ್ಯಾಗ್ ನಲ್ಲಿ ಏನ್ ತುಂಬಿಸ್ಕೊಂಡು ಹೋಗ್ತೇವೆ? ಮಾಮೂಲಿ ಬಟ್ಟೆ ಬರೆ ಅಲ್ವಾ? ಆದ್ರೆ ಇಲ್ಲೊಬ್ಬ ವ್ಯಕ್ತಿ ಟ್ರಾಲಿ ಬ್ಯಾಗ್‌ವೊಂದರಲ್ಲಿ ಜೀವಂತ ಆಮೆಗಳನ್ನು ಸಾಗಿಸುತ್ತಿದ್ದ ಘಟನೆ ನಡೆದಿದೆ.

ಬೆಂಗಳೂರಿನ ಗಾಂಧಿನಗರ ಪ್ರದೇಶದಲ್ಲಿ DRI ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಹಸಿರು ಬಣ್ಣದ ಟ್ರಾಲಿ ಬ್ಯಾಗ್‌ವೊಂದು ಅನುಮಾನಕ್ಕೆ ಕಾರಣವಾಗಿತ್ತು. ಈ ಅನುಮಾನದಿಂದಾಗಿ ಅಧಿಕಾರಿಗಳು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ಬ್ಯಾಗ್‌ ಪರಿಶೀಲಿಸಿದಾಗ 180 ಜೀವಂತ ಭಾರತೀಯ ಸ್ಟಾರ್ ಆಮೆಗಳು ಪತ್ತೆಯಾಗಿವೆ.

ವಿಚಾರಣೆ ವೇಳೆ ಬಂಧಿತ ಆರೋಪಿ ನೀಡಿರುವ ಮಾಹಿತಿಯ ಪ್ರಕಾರ, ಆತ ಕಲಾಸಿಪಾಳ್ಯದಿಂದ ಈ ಟ್ರಾಲಿ ಬ್ಯಾಗ್‌ ಅನ್ನು ಪಡೆದುಕೊಂಡಿದ್ದ. ಬಳಿಕ ಬ್ಯಾಗ್‌ ಅನ್ನು ಮೆಜೆಸ್ಟಿಕ್‌ಗೆ ಕೊಂಡೊಯ್ದು, ಅಲ್ಲಿ ಅಪರಿಚಿತ ವ್ಯಕ್ತಿಯೊಬ್ಬರಿಗೆ ಹಸ್ತಾಂತರಿಸುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ:

ಹಣದ ಆಸೆಯಿಂದಲೇ ತಾನು ಆಮೆಗಳನ್ನು ಸಾಗಿಸಲು ಒಪ್ಪಿಕೊಂಡಿದ್ದಾಗಿ ಆರೋಪಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಈ ಕುರಿತು DRI ಅಧಿಕಾರಿಗಳು ಬಂಧಿತ ಆರೋಪಿಯನ್ನು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದು, ಸಾಗಾಟದ ಮಾರ್ಗ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ವಶಪಡಿಸಿಕೊಂಡ 180 ಭಾರತೀಯ ಸ್ಟಾರ್ ಆಮೆಗಳನ್ನು Wild Life (Protection) Act, 1972ರ ಅಡಿಯಲ್ಲಿ ಜಪ್ತಿ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar