September 9, 2026
Wednesday, September 9, 2026
spot_img

Insta ಟ್ರೆಂಡಿಂಗ್‌ನಲ್ಲಿ ’80s ರೆಟ್ರೋ ಮ್ಯಾಜಿಕ್: ChatGPT ಯೂಸ್ ಮಾಡಿ ಹೀರೋ/ಹೀರೋಯಿನ್ ಆಗೋದು ಹೇಗೆ?

ಯಪ್ಪಾ… ಇನ್‌ಸ್ಟಾಗ್ರಾಮ್ ಓಪನ್ ಮಾಡಿದ್ರೆ ಸಾಕು, ಎಲ್ಲರೂ ರೆಟ್ರೋ ಲುಕ್, ’80s ಕಾಲದ ಫೋಟೋಗಳು, ವಿಡಿಯೋಗಳನ್ನು ಹಾಕಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸ್ತಿದ್ದಾರೆ. ಏನಪ್ಪಾ ಇದು, ಪ್ರತಿಯೊಬ್ಬರೂ ದಿಢೀರ್ ಎಂದು 1980ರ ಕಾಲಕ್ಕೆ ಹೋಗಿಬಿಟ್ಟಿದ್ದಾರೆ ಅನ್ಕೊಂಡ್ರಾ? ಇದುವೇ ಈಗ ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ಟ್ರೆಂಡ್ ಆಗಿರೋ “80s Vintage AI Photo Trend”!

ಏನಿದು 80s ಇನ್‌ಸ್ಟಾಗ್ರಾಮ್ ಟ್ರೆಂಡ್?

ನಮ್ಮ ಅಪ್ಪ-ಅಮ್ಮಂದಿರ ಕಾಲದ ಆ ಡಿಸ್ಕೋ ಲೈಟ್ಸ್, ಬೆಲ್ ಬಾಟಮ್ ಪ್ಯಾಂಟ್, ದೊಡ್ಡ ಸನ್‌ಗ್ಲಾಸ್, ಕ್ರಾಪ್ ಮಾಡಿದ ಕರ್ಲಿ ಹೇರ್, ಅಷ್ಟು ಮಾತ್ರ ಅಲ್ಲ.. ಆ ಕಾಲದ ಕ್ಯಾಮೆರಾದಲ್ಲಿ ಬರ್ತಿದ್ದ ‘ಗ್ರೇನಿ’ ಫಿಲ್ಟರ್ ಲುಕ್ ಇದೆಯಲ್ಲ. ಅದನ್ನ ಈಗಿನ AI ಟೂಲ್ಸ್ ಯೂಸ್ ಮಾಡಿ ಮರುಸೃಷ್ಟಿ ಮಾಡೋದು ಈಗ ಸೂಪರ್ ಟ್ರೆಂಡಿಂಗ್‌ನಲ್ಲಿದೆ. ಪ್ರತಿಯೊಬ್ಬ ಸೆಲಬ್ರೆಟಿ, ಇನ್‌ಫ್ಲುಯೆನ್ಸರ್‌ನಿಂದ ಹಿಡಿದು ನಾರ್ಮಲ್ ಯೂಸರ್ಸ್‌ವರೆಗೂ ಎಲ್ಲರೂ ಈ 80s ವೈಬ್ಸ್‌ಗೆ ಫಿದಾ ಆಗಿದ್ದಾರೆ.

ನೀವು ನಿಜವಾಗಿಯೂ ಆ ಕಾಲದ ಬಟ್ಟೆ ಹಾಕ್ಕೊಂಡು ಫೋಟೋ ಶೂಟ್ ಮಾಡೋ ಅಗತ್ಯವೇ ಇಲ್ಲ. ChatGPT ಹಾಗೂ AI ಟೂಲ್‌ಗಳನ್ನು ಬಳಸಿ ನಿಮ್ಮ ಈಗಿನ ಫೋಟೋವನ್ನು 80ರ ದಶಕದ ಕ್ಲಾಸಿಕ್ ಫೋಟೋದಂತೆ ಕ್ಷಣಾರ್ಧದಲ್ಲಿ ಬದಲಾಯಿಸಬಹುದು.

ಆ 80ರ ದಶಕದ ವೈರಲ್ ಟ್ರೆಂಡ್ ಏನು, ಅದನ್ನು ಮಾಡೋದು ಹೇಗೆ ಮತ್ತು ಅದಕ್ಕೆ ಬೇಕಾಗುವ ChatGPT Prompts ಬಗ್ಗೆ ಇಲ್ಲಿದೆ ಕಂಪ್ಲೀಟ್ ಗೈಡ್:

ನಿಮ್ಮ ಮೊಬೈಲ್‌ನಲ್ಲಿ ChatGPT ಆ್ಯಪ್ ಓಪನ್ ಮಾಡಿ.

ನೀವು ಚೆನ್ನಾಗಿ ಕಾಣುವ, ಸ್ಪಷ್ಟವಾಗಿ ಕಾಣಿಸುವ ಒಂದು ಕ್ಲಿಯರ್ ಸೆಲ್ಫಿ ಅಥವಾ ಫೋಟೋವನ್ನು ಅಲ್ಲಿ ಅಪ್‌ಲೋಡ್ ಮಾಡಿ.

ಕೆಳಗೆ ನೀಡಲಾದ ’80s ವೈಬ್ ಕೊಡುವ ಪ್ರಾಂಪ್ಟ್‌ಗಳಲ್ಲಿ ಒಂದನ್ನು ಕಾಪಿ ಮಾಡಿ, ಅಲ್ಲಿ ಪೇಸ್ಟ್ ಮಾಡಿ ಎಂಟರ್ ಕೊಡಿ. AI ಕೆಲವೇ ಸೆಕೆಂಡುಗಳಲ್ಲಿ ನಿಮ್ಮನ್ನು 80ರ ದಶಕದ ಹೀರೋ ಅಥವಾ ಹೀರೋಯಿನ್ ಥರ ಬದಲಾಯಿಸಿ ಸೂಪರ್ ಫೋಟೋ ರೆಡಿ ಮಾಡಿ ಕೊಡುತ್ತೆ.

ಆ ಫೋಟೋ ಡೌನ್‌ಲೋಡ್ ಮಾಡಿಕೊಂಡು, ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡಿಂಗ್ ’80s ಹಿಂದಿ/ಕನ್ನಡ ಸಾಂಗ್ ಹಾಕಿ ರೀಲ್ಸ್ ಅಥವಾ ಪೋಸ್ಟ್ ಮಾಡಿ. #80sAesthetic #RetroVibes #Throwback80s #ViralTrend ಹ್ಯಾಷ್ಟ್ಯಾಗ್ ಹಾಕಿ ಇನ್‌ಸ್ಟಾಗ್ರಾಮ್‌ಗೆ ಅಪ್ಲೋಡ್ ಮಾಡಿ.

ChatGPT ಪ್ರಾಂಪ್ಟ್‌ಗಳು:

ಕ್ಲಾಸಿಕ್ ಬಾಲಿವುಡ್ ಹೀರೋ/ಹೀರೋಯಿನ್ ಲುಕ್

“A cinematic 1980s retro portrait of a person inspired by vintage classic Indian cinema. Wearing a denim jacket with oversized retro sunglasses, feathered voluminous hair, soft grainy film effect, warm golden hour lighting, analog camera texture, shot on 35mm lens, highly detailed, photorealistic.”

80s ಡಿಸ್ಕೋ ಅಂಡ್ ಪಾಪ್ ಸ್ಟಾರ್ ವೈಬ್

“1980s retro disco portrait of a person in a flashy sequin outfit, neon lights in the background, big styled hair, soft vintage glow, glossy finish, retro cassette tape era aesthetic, shot on Kodachrome film, ultra-realistic.”

80s ಕಾಲೇಜ್ ಲುಕ್

“1980s aesthetic portrait of a young person sitting on a classic vintage scooter, wearing colorful retro street fashion, oversized shirt, polaroid camera tint, pastel background tones, nostalgia vibe, 35mm photo style.”

80s ಮ್ಯಾಗಜಿನ್ ಕವರ್ ಲುಕ್

“A high-fashion 1980s magazine cover shot of a stylish person, retro typography effect, bold makeup, classic vintage hair, soft studio lighting, muted pastel colors, authentic 80s print paper texture.”

ಗರ್ಲ್ಸ್ 80s ಕ್ಲಾಸಿಕ್ ಸೀರೆ ಲುಕ್:

“Convert this picture into a 1980s retro South Indian aesthetic. Vintage polka dot saree, puff sleeve blouse, retro hair bun with flowers, sepia and warm film tones, subtle light leaks, nostalgic 80s photo print effect.”

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !