ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ದೇಶದಲ್ಲಿ ಕ್ರಿಕೆಟ್ ಅಂದ್ರೆ ಬರಿ ಆಟ ಅಲ್ಲ, ಅದೊಂದು ಎಮೋಷನ್. ಈಗ ಹಾರ್ದಿಕ್ ಪಾಂಡ್ಯ ಫ್ಯಾನ್ಸ್‌ಗೆ ಬಿಗ್ ನ್ಯೂಸ್ ಒಂದಿದೆ, ಆಸ್ಟ್ರೇಲಿಯಾ ‘A’ ವಿರುದ್ಧ ನಡೆಯಲಿರೋ ಸರಣಿಗೆ ಬಿಸಿಸಿಐ ಸೆಲೆಕ್ಷನ್ ಕಮಿಟಿ ‘ಇಂಡಿಯಾ A’ ತಂಡವನ್ನು ಅನೌನ್ಸ್ ಮಾಡಿದ್ದು, ಅದರಲ್ಲಿ ನಮ್ಮ ಸ್ಟಾರ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಜಾಗ ಪಡೆದುಕೊಂಡಿದ್ದಾರೆ.
ಕಳೆದ ಒಂದಷ್ಟು ದಿನಗಳಿಂದ ವೈಟ್-ಬಾಲ್ ಕ್ರಿಕೆಟ್ ಮತ್ತು ಫಿಟ್ನೆಸ್ ಮೇಲೆ ಕಾನ್ಸಂಟ್ರೇಟ್ ಮಾಡ್ತಿದ್ದ ಹಾರ್ದಿಕ್, ಈಗ ಮತ್ತೆ 50 ಓವರ್‌ಗಳ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡೋಕೆ ರೆಡಿಯಾಗಿದ್ದಾರೆ. ಮುಂದಿನ ವರುಷ ಸೌತ್ ಆಫ್ರಿಕಾದಲ್ಲಿ ನಡೆಯಲಿರೋ ಒಡಿಐ ವರ್ಲ್ಡ್ ಕಪ್‌ಗೆ ಟೀಮ್ ಇಂಡಿಯಾ ಈಗಿನಿಂದಲೇ ಮಾಸ್ಟರ್ ಪ್ಲಾನ್ ರೆಡಿ ಮಾಡ್ತಿದೆ. ಆ ಪ್ಲಾನ್‌ನ ಮೇನ್ ಪಾರ್ಟ್ ಅಂದ್ರೆ ಅದು ಹಾರ್ದಿಕ್ ಪಾಂಡ್ಯ.
ಆದ್ರೆ ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ. ಹಾರ್ದಿಕ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಜಾಗ ಗಿಟ್ಟಿಸಬೇಕಂದ್ರೆ ಮೊದಲು ತಮ್ಮ ಫಿಟ್ನೆಸ್ ಪ್ರೂವ್ ಮಾಡ್ಕೋಬೇಕಿದೆ. ಗ್ರೌಂಡ್‌ನಲ್ಲಿ ಸಿಕ್ಸರ್ ಬಾರಿಸೋದಷ್ಟೇ ಅಲ್ಲ, ಲಾಂಗ್ ಸ್ಪೆಲ್ ಬೌಲಿಂಗ್ ಮಾಡಿ ಬಾಡಿ ಕಂಪ್ಲೀಟ್ ಫಿಟ್ ಆಗಿದೆ ಅಂತ ತೋರಿಸೋದು ತುಂಬಾ ಇಂಪಾರ್ಟೆಂಟ್.
ಈ ಸರಣಿಯ ಎಲ್ಲಾ ಮ್ಯಾಚ್‌ಗಳು ಪುದುಚೇರಿಯಲ್ಲಿ ನಡೆಯಲಿವೆ. ಮೊದಲು ಸೆಪ್ಟೆಂಬರ್ 22 ರಿಂದ ಮಲ್ಟಿ-ಡೇ ಪಂದ್ಯಗಳು ಶುರುವಾದರೆ, ಅಕ್ಟೋಬರ್ 06 ರಿಂದ ಬಹುನಿರೀಕ್ಷಿತ ಒನ್-ಡೇ ಸರಣಿ ಕದನ ಆರಂಭವಾಗಲಿದೆ. ಸೆಪ್ಟೆಂಬರ್ 27, 30 ಮತ್ತು ಅಕ್ಟೋಬರ್ 3 ರಂದು ನಮ್ಮ ಸೀನಿಯರ್ ಇಂಡಿಯಾ ಟೀಮ್ ವೆಸ್ಟ್ ಇಂಡೀಸ್ ಜೊತೆ ಮೂರು ಒಡಿಐ ಮ್ಯಾಚ್‌ಗಳನ್ನು ಆಡಲಿದೆ.
ಒಟ್ಟಿನಲ್ಲಿ, ಬ್ಯಾಟ್‌ನಲ್ಲೂ ರನ್ ಹೊಳೆ ಹರಿಸಿ, ಬಾಲ್‌ನಲ್ಲೂ ವಿಕೆಟ್ ಕಿತ್ತು ಪಕ್ಕಾ ಆಲ್-ರೌಂಡರ್ ಶೋ ತೋರಿಸೋಕೆ ಹಾರ್ದಿಕ್ ರೆಡಿಯಾಗಿದ್ದಾರೆ. ಸೆಲೆಕ್ಟರ್ಸ್ ಕೂಡ ಇವರ ಫಾರ್ಮ್ ಮತ್ತು ಫಿಟ್ನೆಸ್ ಮೇಲೆ ಕಣ್ಣಿಟ್ಟಿದ್ದಾರೆ. ಪುದುಚೇರಿಯಲ್ಲಿ ಹಾರ್ದಿಕ್ ಧಮಾಕ ಹೇಗಿರುತ್ತೆ ಎಂದು ನೋಡೋಕೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.



