September 10, 2026
Thursday, September 10, 2026
spot_img

ಥಿಯೇಟರ್‌ನಲ್ಲಿ ಸರ್ದಾರ್-2 ಧಮಾಕ: ಕಾರ್ತಿ ಆ್ಯಕ್ಷನ್‌ಗೆ ಫ್ಯಾನ್ಸ್ ಫಿದಾ, ಸೆಕೆಂಡ್ ಹಾಫ್ ಸ್ವಲ್ಪ ಸ್ಲೋ ಆಯ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ತಮಿಳು ಚಿತ್ರರಂಗದ ಮಾಸ್ ಅಂಡ್ ಕ್ಲಾಸ್ ಹೀರೋ ಕಾರ್ತಿ ಅಭಿನಯದ, ಎಲ್ಲರೂ ಕಾತುರದಿಂದ ಕಾಯುತ್ತಿದ್ದ ‘ಸರ್ದಾರ್ 2’ ಸಿನಿಮಾ ಕೊನೆಗೂ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. 2022ರಲ್ಲಿ ಬಂದಿದ್ದ ‘ಸರ್ದಾರ್’ ಪಾರ್ಟ್-1 ಅದೇ ಸೇಮ್ ಡೈರೆಕ್ಟರ್ ಪಿಎಸ್ ಮಿತ್ರನ್ ಈ ಸೀಕ್ವೆಲ್ ನಿರ್ದೇಶಿಸಿದ್ದಾರೆ. ಕಾರ್ತಿ ಮತ್ತೆ ಡಬಲ್ ರೋಲ್‌ನಲ್ಲಿ ಅಬ್ಬರಿಸಿದ್ದು, ಜೊತೆಗೆ ಎಸ್‌ಜೆ ಸೂರ್ಯ, ಮಾಳವಿಕಾ ಮೋಹನನ್, ರಜಿಷಾ ವಿಜಯನ್ ಮತ್ತು ಆಶಿಕಾ ರಂಗನಾಥ್ ದೊಡ್ಡ ತಾರಾಗಣವೇ ಇದೆ. ಸಿನಿಮಾ ರಿಲೀಸ್ ಆಗಿ ಫಸ್ಟ್ ಶೋ ಮುಗಿಯುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಮಾತುಕತೆ ಶುರುವಾಗಿದೆ.

ಸಿನಿಮಾ ನೋಡಿದ ಪ್ರೇಕ್ಷಕರು ಹೇಳ್ತಿರೋ ಮೊದಲ ಮಾತು ಅಂದ್ರೆ, ಕಾರ್ತಿ ಆಕ್ಟಿಂಗ್ ಮಾತ್ರ ಬೇರೆ ರೇಂಜ್. ಡಬಲ್ ರೋಲ್ ಹ್ಯಾಂಡಲ್ ಮಾಡಿರೋ ರೀತಿ, ಆ ವಾಯ್ಸ್ ಮಾಡುಲೇಷನ್ ಮತ್ತು ಮ್ಯಾನರಿಸಂ ಸಖತ್ ವರ್ಕ್ ಆಗಿದೆ. ಫಸ್ಟ್ ಹಾಫ್ ಅಂತೂ ಫುಲ್ ಟೆಕ್ನಿಕಲ್ ಆಗಿ, ಸಖತ್ ಸ್ಪೀಡ್‌ನಲ್ಲಿ ಹೋಗುತ್ತೆ. ಇಂಟರ್ವಲ್ ಬ್ಲಾಕ್ ತನಕ ಸಿನಿಮಾ ಪ್ರೇಕ್ಷಕರನ್ನು ಸೀಟ್ ತುದಿಯಲ್ಲಿ ಕೂರಿಸುತ್ತೆ. ವಿಶುವಲ್ಸ್ ಮತ್ತು ಆಕ್ಷನ್ ಸೀನ್‌ಗಳಿಗಂತೂ ಮೇಕರ್‌ಗಳು ಕೋಟಿ ಕೋಟಿ ಸುರಿದಿರೋದು ಸ್ಕ್ರೀನ್ ಮೇಲೆ ಎದ್ದು ಕಾಣುತ್ತೆ. ಟ್ವಿಟರ್‌ನಲ್ಲಿ ಒಬ್ಬರು “ಆಕ್ಷನ್ ಪ್ಯಾಕ್ಡ್ ಫಸ್ಟ್ ಹಾಫ್, ಟೆಕ್ನಿಕಲ್ ಆಗಿ ಸಿನಿಮಾ ಸಖತ್ ರಿಚ್ ಆಗಿದೆ” ಎಂದು ಹೊಗಳಿದ್ದಾರೆ.

ಫಸ್ಟ್ ಹಾಫ್‌ಗೆ ಸಿಕ್ಕಿದ ರೆಸ್ಪಾನ್ಸ್ ಸೆಕೆಂಡ್ ಹಾಫ್‌ಗೆ ಪೂರ್ತಿಯಾಗಿ ಸಿಕ್ಕಿಲ್ಲ ಅನ್ನೋದು ಕೆಲವರ ದೂರು. ಸಿನಿಮಾ ಲೆಂತ್ ಸ್ವಲ್ಪ ಜಾಸ್ತಿಯಾಯ್ತು, ಕಥೆ ಎಳೆದಂತೆ ಅನಿಸುತ್ತೆ ಅನ್ನೋ ಕಮೆಂಟ್ಸ್ ಕೂಡ ಬರ್ತಿವೆ. “ಕಥೆಯ ಸ್ಕೇಲ್ ಮತ್ತು ವಿಶುವಲ್ಸ್ ದೊಡ್ಡದಾಗಿದೆ, ಆದರೆ ಪೇಸಿಂಗ್ ಸ್ವಲ್ಪ ಸ್ಲೋ ಅನ್ನಿಸುತ್ತೆ” ಎಂದು ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಮ್ಯೂಸಿಕ್ ವಿಚಾರಕ್ಕೆ ಬಂದರೆ, ಹಿನ್ನೆಲೆ ಸಂಗೀತ ಇನ್ನು ಚೆನ್ನಾಗಿರಬೇಕಿತ್ತು, ಸೀನ್‌ಗಳಿಗೆ ತಕ್ಕಂತೆ ಮಾಸ್ ಎಲಿವೇಷನ್ ಸಿಗಲಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಕೆಲವು ಅಭಿಮಾನಿಗಳಿಗೆ ಈ ಸೀಕ್ವೆಲ್ ಪೂರ್ತಿಯಾಗಿ ಕಿಕ್ ಕೊಟ್ಟಿಲ್ಲ. “ಪಾರ್ಟ್-1 ಸ್ಯಾಂಪಲ್‌ನಲ್ಲೇ ಕಥೆ ಹೇಳಿದ್ದಾರೆ, ಆದ್ರೆ ಆ ಹಳೆಯ ಥ್ರಿಲ್ ಮತ್ತು ಎಮೋಷನ್ ಈ ಪಾರ್ಟ್‌ನಲ್ಲಿ ಮಿಸ್ ಆಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಸರ್ದಾರ್ 2’ ಒಂದು ಗ್ರ್ಯಾಂಡ್ ಸ್ಪೈ ಥ್ರಿಲ್ಲರ್. ಕಾರ್ತಿ ಆಕ್ಟಿಂಗ್ ಮತ್ತು ಆಕ್ಷನ್ ಸೀಕ್ವೆನ್ಸ್ ಇಷ್ಟಪಡುವವರಿಗೆ ಇದು ಥಿಯೇಟರ್‌ನಲ್ಲಿ ಹಬ್ಬ. ಆದರೆ ಕಥೆಯ ವೇಗ ಮತ್ತು ಲೆಂತ್ ಒಂದಿಷ್ಟು ಪ್ರೇಕ್ಷಕರಿಗೆ ಕೊಂಚ ಬೇಸರ ತರಿಸಿದೆ. ವೀಕೆಂಡ್ ಹತ್ತಿರವಾಗುತ್ತಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಯಾವ ಮಟ್ಟದ ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !