ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ದೈತ್ಯ ಸಿನಿಮಾಗಳು ಭಾರತೀಯ ಚಿತ್ರರಂಗವನ್ನು ಆಳುತ್ತಿದ್ದರೂ, ವಿದೇಶಿ ಮಾರುಕಟ್ಟೆಯಲ್ಲಿ ಬಾಲಿವುಡ್‌ನ ‘ಬಾದ್‌ಷಾ’ ಶಾರುಖ್ ಖಾನ್ ಅವರೇ ಅಸಲಿ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ಮುಂಬರುವ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ವಿದೇಶಿ ಪ್ರದರ್ಶನ ಹಕ್ಕುಗಳು ಬೃಹತ್ ಮೊತ್ತಕ್ಕೆ ಮಾರಾಟವಾಗಿದ್ದು, ಇಡೀ ಭಾರತೀಯ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದೆ.
ದುಬೈ ಮೂಲದ ‘ಫಾರ್ಸ್ ಫಿಲ್ಮ್ಸ್ ಸಂಸ್ಥೆಯು ‘ಕಿಂಗ್’ ಸಿನಿಮಾದ ವಿದೇಶಿ ವಿತರಣಾ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಅಂದರೆ ಸುಮಾರು 175 ಕೋಟಿಗೆ ಖರೀದಿಸಿದೆ. ಇಲ್ಲಿಯವರೆಗೆ ಶಾರುಖ್ ಅವರ ‘ಪಠಾಣ್’ ಮತ್ತು ‘ಜವಾನ್’ ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಯಶ್ ರಾಜ್ ಫಿಲ್ಮ್ಸ್ ವಿದೇಶಗಳಲ್ಲಿ ವಿತರಿಸಿತ್ತು. ಆದರೆ ಈ ಬಾರಿ ಫಾರ್ಸ್ ಫಿಲ್ಮ್ಸ್ ಸಂಸ್ಥೆಯು ಮಿನಿಮಮ್ ಗ್ಯಾರಂಟಿ ಆಧಾರದ ಮೇಲೆ 175 ಕೋಟಿ ನೀಡಿ ಈ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಇದುವರೆಗೆ ಯಾವುದೇ ಭಾರತೀಯ ಸಿನಿಮಾದ ವಿದೇಶಿ ಹಕ್ಕುಗಳು 100 ಕೋಟಿ ರೂಪಾಯಿಯ ಗಡಿ ದಾಟಿರಲಿಲ್ಲ.
ವಿದೇಶಗಳಲ್ಲಿ ವಿತರಕರಿಗೆ ಶೇ. 50 ರಷ್ಟು ಮಾತ್ರ ಲಾಭದ ಪಾಲು ಸಿಗುತ್ತದೆ. ಹಾಗಾಗಿ, ಫಾರ್ಸ್ ಫಿಲ್ಮ್ಸ್ ಹಾಕಿರುವ ಹೂಡಿಕೆಯನ್ನು ಮರಳಿ ಪಡೆಯಲು ‘ಕಿಂಗ್’ ಸಿನಿಮಾ ವಿದೇಶಿ ಗಲ್ಲಾಪೆಟ್ಟಿಗೆಯಲ್ಲಿ ಕನಿಷ್ಠ 37 ರಿಂದ 40 ಮಿಲಿಯನ್ ಡಾಲರ್, ಅಂದರೆ ಸುಮಾರು 350 ರಿಂದ 375 ಕೋಟಿ ಗ್ರಾಸ್ ಕಲೆಕ್ಷನ್ ಮಾಡಬೇಕಾಗುತ್ತದೆ.
ಹಿಂದೆ ಶಾರುಖ್ ಅವರ ‘ಪಠಾಣ್’ ಮತ್ತು ‘ಜವಾನ್’ ಸಿನಿಮಾಗಳು ವಿದೇಶದಲ್ಲಿ ತಲಾ 400 ಕೋಟಿಗೂ ಹೆಚ್ಚು ಗಳಿಕೆ ಕಂಡಿದ್ದವು. ಹಾಗಾಗಿ ‘ಕಿಂಗ್’ ಸಿನಿಮಾ ಲಾಭದ ಹಾದಿಯಲ್ಲ ಸಾಗಬೇಕೆಂದರೆ, ‘ಆರ್‌ಆರ್‌ಆರ್’ (430 ಕೋಟಿ) ಅಥವಾ ‘ಧುರಂಧರ್ 2’ (460 ಕೋಟಿ) ರೀತಿಯ ಹಿಟ್ ಸಿನಿಮಾಗಳ ದಾಖಲೆಯನ್ನು ಮೀರಿಸುವ ಅಗತ್ಯವಿದೆ.



