ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಅವರ ತಂದೆ ವಿ. ಸಂತಕುಮಾರನ್ ನಾಯರ್ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
89 ವರ್ಷದ ಸಂತಕುಮಾರನ್ ಅವರನ್ನು ಅನಾರೋಗ್ಯದ ಕಾರಣ ಕೊಚ್ಚಿಯ ಲಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಕೋತಮಂಗಲದಲ್ಲಿರುವ ಅವರ ಮನೆಯಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು.
ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕೋತಮಂಗಲದಲ್ಲಿರುವ ಅವರ ಮನೆಯಲ್ಲಿ ಸಾರ್ವಜನಿಕ ದರುಶನಕ್ಕಾಗಿ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ. ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ನಾಯರ್ ಅವರು ನಿವೃತ್ತ ಎಲ್ಐಸಿ ವಲಯ ವ್ಯವಸ್ಥಾಪಕರಾಗಿದ್ದರು. ಅವರು ಪತ್ನಿ ಟಿ.ಎನ್. ಸಾವಿತ್ರಿದೇವಿ ಹಾಗೂ ಮಕ್ಕಳಾದ ದೀಪು, ನಿವೇದಿತಾ, ದಿವ್ಯಾ ಮತ್ತು ಶ್ರೀಶಾಂತ್ ಅವರನ್ನು ಅಗಲಿದ್ದಾರೆ.
ಸಂತಕುಮಾರನ್ ಅವರ ನಿಧನಕ್ಕೆ ಕ್ರಿಕೆಟ್ ಗಣ್ಯರು ಸಂತಾಪ ಸೂಚಿಸಿದ್ದು, ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.



