ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕೆಜಿಎಫ್’ ಸಿನಿಮಾ ಸೃಷ್ಟಿಸಿದ ಹವಾ ನಮಗೆಲ್ಲ ಗೊತ್ತೇ ಇದೆ. ರಾಕಿ ಬಾಯ್ ಯಶ್ ನೆಕ್ಸ್ಟ್ ಯಾವ ಸಿನಿಮಾ ಮಾಡ್ತಾರೆ ಅಂತ ಇಡೀ ಇಂಡಿಯಾ ಮಾತ್ರ ಅಲ್ಲ, ಗ್ಲೋಬಲ್ ಲೆವೆಲ್‌ನಲ್ಲೇ ಫ್ಯಾನ್ಸ್ ಕಾಯ್ತಿದ್ರು. ಆ ರೇಂಜ್ ಹೈಪ್ ನಡುವೆ ಬಂದಿದ್ದೇ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’. ಆದರೆ, ಥಿಯೇಟರ್‌ಗೆ ಬಂದಮೇಲೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡಷ್ಟು ಮ್ಯಾಜಿಕ್ ಮಾಡಲಿಲ್ಲ, ಜನರಿಗೂ ಅಷ್ಟಾಗಿ ಕನೆಕ್ಟ್ ಆಗ್ಲಿಲ್ಲ. ಇದನ್ನೇ ಕಾದಿದ್ದ ಕೆಲವರು, “ಯಶ್ ಶೂಟಿಂಗ್ ಮಧ್ಯೆ ಜಾಸ್ತಿ ತಲೆಹಾಕಿದ್ರು, ದೃಶ್ಯಗಳನ್ನೆಲ್ಲ ತಮಗೆ ಬೇಕಾದಂಗೆ ಚೇಂಜ್ ಮಾಡಿಸಿದ್ರು, ಅದಕ್ಕೇ ಸಿನಿಮಾ ಉಲ್ಟಾಪಲ್ಟಾ ಆಯ್ತು” ಎಂದು ಸೋಶಿಯಲ್ ಮೀಡಿಯಾದಲ್ಲಿ ಕಥೆ ಕಟ್ಟೋಕೆ ಶುರು ಮಾಡಿದ್ರು.
ಈಗ ಇದೇ ವಿಚಾರದ ಬಗ್ಗೆ ಸಿನಿಮಾದಲ್ಲಿ ಪ್ರಮುಖ ರೋಲ್ ಮಾಡಿದ್ದ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡ್ತಾ ಓಪನ್ ಆಗಿ ಸತ್ಯ ಹೊರಹಾಕಿದ್ದಾರೆ.
ಸಿನಿಮಾ ಯಾಕೆ ಓಡಲಿಲ್ಲ ಎಂದು ಕೇಳಿದ್ದಕ್ಕೆ ಅಕ್ಷಯ್, “ನೋಡಿ, ಸಿನಿಮಾ ರಿಸಲ್ಟ್ ಅನ್ನೋದು ನಮ್ ಕೈಯಲ್ಲಿ ಇರಲ್ಲ. ಈ ಸಿನಿಮಾನ ಒಂದು ಹೊಸ ತರ, ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಮಾಡೋಕೆ ಪ್ರಿಪೇರ್ ಆಗಿದ್ವಿ. ಆದ್ರೆ ಎಲ್ಲೋ ಒಂದು ಕಡೆ ನಾವು ಅಂದುಕೊಂಡ ಟಾರ್ಗೆಟ್ ತಲುಪೋಕೆ ಆಗಲಿಲ್ಲ. ಹಾಗಂತ ನಾನು ಯಾರನ್ನೂ ಬ್ಲೇಮ್ ಮಾಡಲ್ಲ. ನಾವೆಲ್ಲಾ ಒಂಥರಾ ಫ್ಯಾಮಿಲಿ ತರ ಕಷ್ಟಪಟ್ಟು ಕೆಲಸ ಮಾಡಿದ್ದೀವಿ. ಏನೇ ಆದ್ರೂ ಈ ಸಿನಿಮಾ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.
ಯಶ್ ಡೈರೆಕ್ಷನ್‌ನಲ್ಲಿ ಮಧ್ಯಪ್ರವೇಶಿಸಿದ್ರು ಅನ್ನೋ ವದಂತಿಗಳ ಬಗ್ಗೆ ಮಾತನಾಡಿದ ಅವರು, “ನನ್ನ ಎಕ್ಸ್‌ಪೀರಿಯನ್ಸ್ ಪ್ರಕಾರ ಸೆಟ್‌ನಲ್ಲಿ ಆ ತರದ್ದೇನೂ ನಡೆದೇ ಇಲ್ಲ. ದುಡ್ಡು ಕೊಟ್ಟು ಟಿಕೆಟ್ ತಗೊಂಡು ಸಿನಿಮಾ ನೋಡಿದ ಜನಕ್ಕೆ ಅವರ ಅಭಿಪ್ರಾಯ ಹೇಳೋಕೆ, ವಿಶ್ಲೇಷಣೆ ಮಾಡೋಕೆ ಎಲ್ಲಾ ಹಕ್ಕಿದೆ. ಅವರವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಏನು ಬೇಕಾದ್ರೂ ಬರ್ಕೋಬಹುದು. ಆದ್ರೆ ನಾನು ಸೆಟ್‌ನಲ್ಲಿ ಇದ್ದವನು. ನನಗೆ ಒಂದೇ ಒಂದು ಡೈರೆಕ್ಟರ್ ಇದ್ದಿದ್ದು, ಅದು ಗೀತು ಮೋಹನ್ ದಾಸ್. ಅವರ ಜೊತೆ ಇನ್ನೊಮ್ಮೆ ಕೆಲಸ ಮಾಡೋ ಆಸೆ ನನಗಿದೆ” ಎಂದು ಗಾಸಿಪ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ.
ರಾಕಿ ಬಾಯ್ ಯಶ್ ಬಗ್ಗೆ ಮಾತಾಡ್ತಾ, “ಯಶ್ ಅವರು ಬೇರೆನೇ ಲೆವೆಲ್ ಮನುಷ್ಯ. ಅವರ ಪರ್ಸನಾಲಿಟಿ ವರ್ಣಿಸೋಕೆ ಆಗಲ್ಲ. ನಾನು ಮೊದಲೇ ಅವರ ಫ್ಯಾನ್, ಜೊತೆಗೆ ಕೆಲಸ ಮಾಡಿದ ಮೇಲೆ ಇನ್ನೂ ಇಂಪ್ರೆಸ್ ಆದೆ. ಅವರು ಒಬ್ಬರೇ ನಿಂತು ಕನ್ನಡ ಚಿತ್ರರಂಗದ ಸಿನಿಮಾನ ಇಡೀ ದೇಶ ತಿರುಗಿ ನೋಡೋ ಹಾಗೆ ಮಾಡಿದವರು. ‘ಟಾಕ್ಸಿಕ್’ ಮೂಲಕ ಕನ್ನಡ ಸಿನಿಮಾನ ಗ್ಲೋಬಲ್ ಲೆವೆಲ್‌ಗೆ ತಗೊಂಡು ಹೋಗೋಕೆ ದೊಡ್ಡ ಪ್ರಯತ್ನ ಪಟ್ಟರು. ಈ ಸಾರಿ ರಿಸಲ್ಟ್ ಬರಲಿಲ್ಲ ನಿಜ, ಆದ್ರೆ ಆ ತರ ರಿಸ್ಕ್ ತಗೊಳ್ಳೋ ಧೈರ್ಯ ಅವರಲ್ಲಿದೆ. ಅವರು ಯಾರ ಹತ್ರನೂ ಚಾನ್ಸ್‌ಗಾಗಿ ಕಾಯಲ್ಲ, ತಮ್ಮನ್ನ ತಾವು ನಂಬಿಕೊಂಡು ಗೆಲ್ಲೋರು” ಎಂದು ಯಶ್ ಅವರ ಕಾನ್ಫಿಡೆನ್ಸ್ ಅನ್ನು ಮನಸಾರೆ ಹೊಗಳಿದ್ದಾರೆ.



