ಬೇಕಾಗುವ ಸಾಮಗ್ರಿಗಳು
ಟಪಿಯೋಕಾ ಪರ್ಲ್ಸ್
ಮಾವಿನಹಣ್ಣು
ಹಾಲು
ಸಕ್ಕರೆ
ಐಸ್ ಕ್ಯೂಬ್ಸ್
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ನೀರು ಕುದಿಸಿ, ಟಪಿಯೋಕಾ ಪರ್ಲ್ಸ್ ಹಾಕಿ 10-15 ನಿಮಿಷ ಬೇಯಿಸಿ. ನಂತರ ತಣ್ಣೀರಿನಲ್ಲಿ ತೊಳೆದು, ಸ್ವಲ್ಪ ಸಕ್ಕರೆ ಪಾಕದಲ್ಲಿ ನೆನೆಸಿಡಿ. ಮಿಕ್ಸಿ ಜಾರ್‌ಗೆ ಮಾವಿನ ಹಣ್ಣಿನ ತಿರುಳು, ಹಾಲು ಮತ್ತು ಸಕ್ಕರೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಒಂದು ಗ್ಲಾಸ್‌ನಲ್ಲಿ ಮೊದಲು ಬೇಯಿಸಿದ ಟಪಿಯೋಕಾ ಬಬಲ್ಸ್ ಹಾಕಿ, ನಂತರ ಐಸ್ ಕ್ಯೂಬ್‌ಗಳನ್ನು ತುಂಬಿ. ಅದರ ಮೇಲೆ ರುಬ್ಬಿಕೊಂಡ ಮಾವಿನ ಮಿಶ್ರಣವನ್ನು ಹಾಕಿದರೆ ತಂಪಾದ ಮತ್ತು ರುಚಿಕರವಾದ ಮ್ಯಾಂಗೋ ಬಬಲ್ ಟೀ ಸಿದ್ಧ.



