November 20, 2026
Friday, November 20, 2026
spot_img

ಸಂಜೆ ಕಾಫಿಗೆ ಬೆಸ್ಟ್ ಪಾರ್ಟ್ನರ್.. ಟ್ರೈ ಮಾಡಿ ಸಖತ್ ಕ್ರಂಚಿ & ಟೇಸ್ಟಿ ಓಟ್‌ಮೀಲ್ ಕುಕೀಸ್

ಬೇಕಾಗುವ ಸಾಮಗ್ರಿಗಳು

ರೋಲ್ಡ್ ಓಟ್ಸ್

ಗೋಧಿ ಹಿಟ್ಟು

ಬೆಣ್ಣೆ

ಸಕ್ಕರೆ

ಮೊಟ್ಟೆ

ಬೇಕಿಂಗ್ ಸೋಡಾ

ದಾಲ್ಚಿನ್ನಿ ಪುಡಿ, ವೆನಿಲ್ಲಾ ಎಸೆನ್ಸ್

ಒಣದ್ರಾಕ್ಷಿ, ಬಾದಾಮಿ, ಚಾಕೊಲೇಟ್ ಚಿಪ್ಸ್

ಉಪ್ಪು

ಮಾಡುವ ವಿಧಾನ

ಒಂದು ಬಟ್ಟಲಿನಲ್ಲಿ ಬೆಣ್ಣೆ ಮತ್ತು ಸಕ್ಕರೆ ಹಾಕಿ ನಯವಾಗಿ, ಹಗುರವಾಗುವಂತೆ ಚೆನ್ನಾಗಿ ಕಲಕಿ. ಇದಕ್ಕೆ ಮೊಟ್ಟೆ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಮತ್ತೊಮ್ಮೆ ಕಲಸಿ. ಅದೇ ಬಟ್ಟಲಿಗೆ ಗೋಧಿ ಹಿಟ್ಟು, ಬೇಕಿಂಗ್ ಸೋಡಾ, ದಾಲ್ಚಿನ್ನಿ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ. ನಂತರ ಓಟ್ಸ್ ಹಾಗೂ ಒಣದ್ರಾಕ್ಷಿ, ಚಾಕೊಲೇಟ್ ಚಿಪ್ಸ್ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. ಹಿಟ್ಟು ತುಂಬಾ ಗಟ್ಟಿಯಾಗಿದ್ದರೆ 1–2 ಚಮಚ ಹಾಲು ಸೇರಿಸಬಹುದು. ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ, ಕೈಯಲ್ಲಿ ಸ್ವಲ್ಪ ತಟ್ಟಿ ಕುಕೀ ಆಕಾರಕ್ಕೆ ತನ್ನಿ. ಬೇಕಿಂಗ್ ಟ್ರೇ ಮೇಲೆ ಬಟರ್ ಪೇಪರ್ ಹಾಕಿ ಸ್ವಲ್ಪ ಅಂತರ ಬಿಟ್ಟು ಕುಕೀಗಳನ್ನು ಜೋಡಿಸಿ. 180°C (350°F) ನಲ್ಲಿ ಮೊದಲೇ ಬಿಸಿ ಮಾಡಿದ ಓವನ್‌ನಲ್ಲಿ 10–12 ನಿಮಿಷ ಬೇಕ್ ಮಾಡಿ ಹೊರತೆಗೆಯಿರಿ. ಹೊರತೆಗೆದ ತಕ್ಷಣ ಕುಕೀಗಳು ಸ್ವಲ್ಪ ಮೃದುವಾಗಿರುತ್ತವೆ 10 ನಿಮಿಷ ತಣಿಸಿದರೆ ಗರಿಗರಿಯಾಗುತ್ತವೆ. ಗಾಳಿಯಾಡದ ಡಬ್ಬದಲ್ಲಿ ಇಟ್ಟು ವಾರದವರೆಗೆ ಬಳಸಬಹುದು.

Must Read