ಏನೇನ್ ಬೇಕು?
ಓಟ್ಸ್
ಹೆಸರುಬೇಳೆ
ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ, ಟೊಮ್ಯಾಟೊ
ತುಪ್ಪ
ಜೀರಿಗೆ,
ಕರಿಬೇವು,
ಹಸಿಮೆಣಸಿನಕಾಯಿ
ಅರಿಶಿಣ
ಉಪ್ಪು
ನೀರು
ಕೊತ್ತಂಬರಿ ಸೊಪ್ಪು
ನಿಂಬೆರಸ
ಮಾಡೋದು ಹೇಗೆ ನೋಡಿಕೊಳ್ಳಿ
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಹಾಕಿ ಘಮ ಬರುವವರೆಗೆ ಹುರಿಯಿರಿ. ಹೆಚ್ಚಿದ ತರಕಾರಿ, ಟೊಮ್ಯಾಟೊ, ನೆನೆಸಿದ ಹೆಸರುಬೇಳೆ ಮತ್ತು ಅರಿಶಿಣ ಸೇರಿಸಿ 2 ನಿಮಿಷ ಹುರಿಯಿರಿ. ನೀರು ಮತ್ತು ಉಪ್ಪು ಹಾಕಿ, ತರಕಾರಿ ಹಾಗೂ ಬೇಳೆ ಅರ್ಧ ಬೆಂದ ನಂತರ ಓಟ್ಸ್ ಸೇರಿಸಿ ಚೆನ್ನಾಗಿ ಕಲಸಿ. ಸಣ್ಣ ಉರಿಯಲ್ಲಿ 4–5 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ ಬಿಸಿಯಾಗಿ ಬಡಿಸಿ.
ಇದನ್ನ ತಿಂದ್ರೆ ಏನ್ ಲಾಭ?
ಓಟ್ಸ್‌ನಲ್ಲಿರುವ ಫೈಬರ್ ಬೇಗ ಹಸಿವಾಗದಂತೆ ತಡೆಯುತ್ತದೆ.
ಹೆಸರುಬೇಳೆ ಮತ್ತು ತರಕಾರಿಗಳು ಹೊಟ್ಟೆಗೆ ಹಗುರವಾಗಿದ್ದು ಜೀರ್ಣಶಕ್ತಿಗೆ ಒಳ್ಳೆಯದು.
ದೇಹಕ್ಕೆ ನಿಧಾನವಾಗಿ ಶಕ್ತಿ ನೀಡುವುದರಿಂದ ಆಯಾಸ ಕಡಿಮೆಯಾಗುತ್ತದೆ.
ನಾರಿನಂಶ ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಏರಿಳಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.



