ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಮುದ್ದಾದ ಜೋಡಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮನೆಯಲ್ಲಿ ಮತ್ತೊಮ್ಮೆ ಖುಷಿಯ ಅಲೆ ಎದ್ದಿದೆ. ಈ ಸ್ಟಾರ್ ದಂಪತಿಗಳು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಮೊದಲ ಮಗುವಿನ ಜನನದ ಬಳಿಕ ಇದೀಗ ಮತ್ತೊಮ್ಮೆ ಪೋಷಕರಾಗುತ್ತಿರುವ ಸಂಭ್ರಮದಲ್ಲಿರುವ ಕಿಯಾರಾ, ತಮ್ಮ ಸುಂದರ ಕುಟುಂಬದ ಕೆಲವು ಅಪರೂಪದ ಹಾಗೂ ಕ್ಯೂಟ್ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಕಿಯಾರಾ ಅಡ್ವಾಣಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳ ಮನಸ್ಸನ್ನು ಗೆದ್ದಿವೆ. ಮೊದಲ ಚಿತ್ರದಲ್ಲಿ ಸ್ವಿಮ್ಮಿಂಗ್ ಪೂಲ್ ಬಳಿ ಬಿಸಿಲಿನ ಮರೆಯಲ್ಲಿ ರಿಲ್ಯಾಕ್ಸ್ ಮಾಡುತ್ತಿರುವ ಕಿಯಾರಾ ಅವರ ಮುಖದ ಕಾಂತಿ ಎದ್ದು ಕಾಣುತ್ತಿದೆ. ಇದರೊಂದಿಗೆ ತಮ್ಮ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಮುದ್ದು ಮಗಳು ಸಾರಾಯಾ ಮಲ್ಹೋತ್ರಾ ಜೊತೆಗಿನ ರಜೆಯ ಸುಂದರ ಕ್ಷಣಗಳನ್ನು ಅವರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ.
https://www.instagram.com/p/DeV_nbaiCS3/?utm_source=ig_web_button_share_sheet
ಈ ಫೋಟೋಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಸಮುದ್ರದ ಕಡಲ ತೀರದಲ್ಲಿ ಕುಟುಂಬದವರು ಬಿಟ್ಟುಬಂದ ಹೆಜ್ಜೆ ಗುರುತುಗಳು. ಕಿಯಾರಾ ಮತ್ತು ಸಿದ್ಧಾರ್ಥ್ ತಮ್ಮ ಮುದ್ದು ಮಗಳು ಸಾರಾಯಾಳ ಮುಖವನ್ನು ಜಗತ್ತಿಗೆ ತೋರಿಸದಿದ್ದರೂ, ಮಗುವಿನ ಪುಟಾಣಿ ಕಾಲುಗಳ ಕ್ಯೂಟ್ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಕೇವಲ ಬೀಚ್ ಮಾತ್ರವಲ್ಲದೆ, ಒಂದು ಸುಂದರವಾದ ಸರೋವರದ ತೀರದಲ್ಲಿ ಪರ್ವತಗಳ ರಮಣೀಯ ದೃಶ್ಯದ ನಡುವೆ ಕಿಯಾರಾ ವಿಶ್ರಾಂತಿ ಪಡೆಯುತ್ತಿರುವುದು ಫೋಟೋಗಳಲ್ಲಿ ಕಾಣಬಹುದು. ಇದರೊಂದಿಗೆ ಸಿದ್ಧಾರ್ಥ್ ಜೊತೆಗಿನ ಒಂದು ಮುದ್ದಾದ ಮಿರರ್ ಸೆಲ್ಫಿಯೂ ಸಹ ಜೋಡಿಯ ಅನ್ಯೋನ್ಯತೆಯನ್ನು ತೋರಿಸಿಕೊಡುತ್ತದೆ.
ಒಟ್ಟಿನಲ್ಲಿ ಈ ಕ್ಯೂಟ್ ಫ್ಯಾಮಿಲಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರ ಮುಖದಲ್ಲೂ ಮಂದಹಾಸ ಮೂಡಿಸಿವೆ.



