October 11, 2026
Sunday, October 11, 2026
spot_img

ಪಾಕೆಟ್ ಫ್ರೆಂಡ್ಲಿ, ಈಸಿ ವೆಲ್‌ನೆಸ್: ‘ಕನ್ವಿನಿಯನ್ಸ್’ ದಾರಿಯಲ್ಲಿ ಭಾರತದ ಹೆಲ್ತ್ ಟ್ರೆಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರೋಗ್ಯವೇ ಭಾಗ್ಯ ಎಂಬ ಮಾತು ನಿಜ, ಆದರೆ ಇಂದಿನ ಧಾವಂತದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಹಿಂದೆಲ್ಲಾ ಪೌಷ್ಟಿಕಾಂಶ ಅಥವಾ ವಿಟಮಿನ್ ಪಡೆಯಲು ದೊಡ್ಡ ಗಾತ್ರದ ಕಹಿ ಮಾತ್ರೆಗಳನ್ನು ನುಂಗಬೇಕಿತ್ತು. ಆದರೆ, ಈಗ ಕಾಲ ಬದಲಾಗಿದೆ. ಭಾರತೀಯ ನಿಕಟ ಬದುಕಿನಲ್ಲಿ ಗಮ್ಮಿಸ್, ವೆಲ್‌ನೆಸ್ ಶಾಟ್ ಗಳು ಮತ್ತು ಎಸೆನ್ಷಿಯಲ್ ಆಯಿಲ್‌ಗಳು ಹೊಸ ಸಂಚಲನ ಸೃಷ್ಟಿಸಿವೆ.

ಈ ಹೊಸ ಬದಲಾವಣೆಯ ಹಿಂದೆ ಇರುವುದು ಒಂದೇ ಒಂದು ಪ್ರಮುಖ ಅಂಶ ‘ಸೌಕರ್ಯ’. ಬ್ಯಾಗಲ್ಲಿ ಇಟ್ಟುಕೊಳ್ಳಲು ಸುಲಭ, ಕುಡಿಯಲು ನೀರು ಬೇಕಿಲ್ಲ ಮತ್ತು ನುಂಗಲು ಕಷ್ಟವಿಲ್ಲ. ಕೆಲಸದ ನಡುವೆ ಅಥವಾ ಪ್ರಯಾಣದಲ್ಲೂ ಅತ್ಯಂತ ಸುಲಭವಾಗಿ ಸೇವಿಸಬಹುದಾದ ಈ ರೂಪಾಂತರಗಳು, ಯುವಜನತೆ ಹಾಗೂ ನಿರಂತರ ಕಾರ್ಯನಿರತರನ್ನು ಬಹುಬೇಗ ಆಕರ್ಷಿಸಿವೆ.

ಕಹಿ ಮಾತ್ರೆಗಳ ಬದಲಿಗೆ ಜೆಲ್ಲಿ ಮಿಠಾಯಿಯಂತಿರುವ ‘ಗಮ್ಮಿ’ಗಳು, ಒಂದೇ ಗುಟುಕಿನಲ್ಲಿ ಪೋಷಕಾಂಶ ನೀಡುವ ‘ಶಾಟ್ ಗಳು’ ಮತ್ತು ಮಾನಸಿಕ ಒತ್ತಡ ನಿವಾರಿಸುವ ‘ಆಯಿಲ್‌ಗಳು’ ಈಗ ಗೃಹಬಳಕೆಯ ಭಾಗವಾಗಿವೆ. ವಿಟಮಿನ್ ಸಿ, ಬಯೋಟಿನ್, ಅಶ್ವಗಂಧ ಯಾವುದೇ ಇರಲಿ, ಅವುಗಳನ್ನು ರುಚಿಕರವಾಗಿ ನೀಡುವ ತಂತ್ರಜ್ಞಾನ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಯಶಸ್ಸು ಕಂಡಿದೆ.

ವಿಶೇಷವೆಂದರೆ, ಈ ಟ್ರೆಂಡ್ ಭಾರತೀಯ ಸಾಂಪ್ರದಾಯಿಕ ಜ್ಞಾನವನ್ನೂ ಅಳವಡಿಸಿಕೊಂಡಿದೆ. ನೆಲ್ಲಿಕಾಯಿ, ಅಶ್ವಗಂಧ ಮತ್ತು ತುಳಸಿಯಂತಹ ಗಿಡಮೂಲಿಕೆಗಳನ್ನು ಆಧುನಿಕ ಷಾಟ್‌ ಹಾಗೂ ಗಮ್ಮಿಗಳ ರೂಪದಲ್ಲಿ ನೀಡಲಾಗುತ್ತಿದೆ. ಇದರಿಂದಾಗಿ ಸಾಂಪ್ರದಾಯಿಕ ವೈದ್ಯ ಪದ್ಧತಿಯು ಆಧುನಿಕ ಪೀಳಿಗೆಗೆ ಇಷ್ಟವಾಗುವ ರೀತಿಯಲ್ಲಿ ಮರುಜೀವ ಪಡೆದುಕೊಂಡಿದೆ.

ಆರೋಗ್ಯ ರಕ್ಷಣೆ ಎಂದರೆ ಕೇವಲ ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವುದಷ್ಟೇ ಅಲ್ಲ, ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಎಂಬ ಅರಿವು ಭಾರತೀಯರಲ್ಲಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ, ದೈನಂದಿನ ಜೀವನಶೈಲಿಗೆ ತೊಂದರೆಯಾಗದಂತೆ ಸುಲಭವಾಗಿ ಹೊಂದಿಕೊಳ್ಳುವ ಈ ‘ವೆಲ್‌ನೆಸ್’ ಉತ್ಪನ್ನಗಳು, ಮುಂಬರುವ ದಿನಗಳಲ್ಲಿ ಭಾರತೀಯ ಆರೋಗ್ಯ ರಕ್ಷಣಾ ವಲಯವನ್ನು ಸಂಪೂರ್ಣವಾಗಿ ಆಳಲಿವೆ ಎಂಬುದರಲ್ಲಿ ಸಂಶಯವಿಲ್ಲ.

Must Read