October 13, 2026
Tuesday, October 13, 2026
spot_img

ಫಿಟ್ & ಫುಡ್ 13 | ನೆನೆಸಿದ ಕಾಬುಲ್‌ ಕಡ್ಲೆಯಿಂದ ಸೂಪರ್‌ ಟೇಸ್ಟಿ ಸ್ಯಾಂಡ್‌ವಿಚ್‌ ತಯಾರು ಮಾಡಬಹುದು, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಬೇಯಿಸಿದ ಕಾಬುಲ್‌ ಕಡ್ಲೆ
ಉಪ್ಪು
ಶುಂಠಿ
ಹಸಿಮೆಣಸು
ಖಾರದಪುಡಿ
ಗರಂ ಮಸಾಲಾ
ಈರುಳ್ಳಿ
ಬೆಣ್ಣೆ
ಬ್ರೆಡ್‌
ಮಯೋನಿಸ್‌

ಮಾಡುವ ವಿಧಾನ

ಮೊದಲು ಕಡ್ಲೆಕಾಳನ್ನು ಮೆತ್ತಗೆ ಬೇಯಿಸಿಕೊಳ್ಳಿ
ಆನಂತರ ಅದಕ್ಕೆ, ಉಪ್ಪು, ಶುಂಠಿ, ಕೊತ್ತಂಬರಿಸೊಪ್ಪು, ಖಾರದಪುಡಿ, ಗರಂ ಮಸಾಲಾ ಹಾಕಿ ಮಿಕ್ಸಿ ಮಾಡಿ
ನಂತರ ಇದಕ್ಕೆ ಹಸಿ ಈರುಳ್ಳಿ ಹಾಗೂ ಮಯೋನಿಸ್‌ ಹಾಕಿಕೊಳ್ಳಿ
ಆನಂತರ ಇದನ್ನು ಬೆಣ್ಣೆಯಲ್ಲಿ ಟಿಕ್ಕಿಗಳಂತೆ ಬೇಯಿಸಿಕೊಳ್ಳಿ
ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ ಬ್ರೆಡ್‌ ಇಟ್ಟು, ಮಧ್ಯದಲ್ಲಿ ಟಿಕ್ಕಿ ಇಡಿ. ನಂತರ ಮೇಲೆ ಇನ್ನೊಂದು ಬ್ರೆಡ್‌ ಇಟ್ಟು ಎರಡೂ ಕಡೆ ಬೇಯಿಸಿಕೊಂಡ್ರೆ ಪ್ರೋಟೀನ್‌ ಸ್ಯಾಂಡ್‌ವಿಚ್‌ ರೆಡಿ

ಏನಿದೆ ಲಾಭ?

ಇದರಲ್ಲಿ ಪ್ರೋಟೀನ್‌, ವಿಟಮಿನ್‌ಸಿ, ಫೋಲೇಟ್‌, ಮ್ಯಾಂಗನೀಸ್‌, ಕ್ಯಾಲ್ಸಿಯಂ, ಝಿಂಕ್‌, ಮೆಗ್ನೀಸಿಯಂ ಹಾಗೂ ಪೊಟ್ಯಾಶಿಯಂ ಇದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ.ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ತೂಕ ಇಳಿಕೆಗೂ ಇದು ಸಹಕಾರಿಯಾಗಿದೆ.

Must Read