Saturday, April 1, 2023

Latest Posts

ತೆನೆ ಹೊತ್ತು ಸುಸ್ತಾಗಿ ಕೈ ಹಿಡಿಯಲು ಹೊರಟ ಸಂಕೇತ್!

ಹೊಸದಿಗಂತ ವರದಿ, ಮಡಿಕೇರಿ:

ತೆನೆಹೊತ್ತು ಸುಸ್ತಾಗಿರುವ ಜಾತ್ಯತೀತ ಜನತಾದಳ(ಜೆಡಿಎಸ್)ದ ಮಾಜಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರು ಇದೀಗ ಕೈ ಹಿಡಿಯಲು ಮುಂದಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೇರಿಯಂಡ ಸಂಕೇತ್ ಪೂವಯ್ಯ ಕಳೆದ 25ವರ್ಷಗಳಿಂದಲೂ ಜನತಾ‌ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು.ಅಲ್ಲದೆ 2018ರ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದರಲ್ಲದೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್’ಗೆ ನಡೆದ ಚುನಾವಣೆಯಲ್ಲೂ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

ನಂತರದ ದಿನಗಳಲ್ಲಿ ಅವರು ಪಕ್ಷದ‌ ರಾಜ್ಯ ವಕ್ತಾರರಾಗಿ ನಿಯೋಜನೆಗೊಂಡಿದ್ದರಾದರೂ, ಪಕ್ಷದ ಚಟುವಟಿಕೆಗಳಿಂದ ಸಾಕಷ್ಟು ದೂರ ಉಳಿದಿದ್ದರು.

ಇದೀಗ ಅವರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದು,ಬುಧವಾರ ವೀರಾಜಪೇಟೆಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ರಾಜ್ಯ ನಾಯಕರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!