Thursday, October 6, 2022

Latest Posts

ರಣ್‌ಬೀರ್ ಕೆನ್ನೆಗೆ ಬಾಡಿಗಾರ್ಡ್ ಹೊಡೆದಿದ್ಯಾಕೆ? ಇಲ್ಲಿದೆ ವಿಡಿಯೋ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ನಡೆದ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ರಣ್‌ವೀರ್ ಸಿಂಗ್ ಬಾಡಿಗಾರ್ಡ್‌ನಿಂದ ಕೆನ್ನೆಗೆ ಹೊಡೆತ ತಿಂದ ವಿಡಿಯೋ ಒಂದು ವೈರಲ್ ಆಗಿದೆ.
ಬಾಡಿಗಾರ್ಡ್ ರಣ್‌ವೀರ್ ಕೆನ್ನೆಗೆ ಹೊಡೆದದ್ದು ಯಾಕೆ ಅನ್ನೊ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.ಇದೀಗ ಅದರ ಹಿಂದಿನ ಸನ್ನಿವೇಶದ ವಿಡಿಯೋವೊಂದು ಹೊರಬಿದ್ದಿದೆ.
ಅಸಲಿಗೆ ಬಾಡಿಗಾರ್ಡ್ ರಣ್‌ವೀರ್ ಕೆನ್ನೆಗೆ ಹೊಡೆದಿಲ್ಲ, ತಪ್ಪಾಗಿ ಕೆನ್ನೆಗೆ ಕೈ ತಾಗಿಸಿದ್ದಾರೆ ಅಷ್ಟೆ. ರಣ್‌ವೀರ್ ಕೂಡ ತಮಾಷೆಯಾಗಿ ಹೊಡೆತ ಬಿದ್ದವರಂತೆ ನಟಿಸಿದ್ದಾರೆ.
ಅವಾರ್ಡ್ ಕಾರ್ಯಕ್ರಮದ ವೇಳೆ ಅತಿ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದರು. ಯಾರೂ ರಣ್‌ವೀರ್‌ರನ್ನು ಮುಟ್ಟದಂತೆ ಕಾಪಾಡಿಕೊಳ್ಳುವ ಸಂದರ್ಭದಲ್ಲಿ ತಪ್ಪಾಗಿ ಬಾಡಿಗಾರ್ಡ್ ಕೈ ರಣ್‌ವೀರ್ ಕೆನ್ನೆಗೆ ತಾಗಿದೆ.
ಈ ವಿಡಿಯೋ ನಂತರ ಅಭಿಮಾನಿಗಳ ಪ್ರಶ್ನೆಗೆ ಉತ್ತರ ದೊರಕಿದ್ದು, ಸಮಾಧಾನವಾಗಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!