ಟ್ವಿಟರ್ ನಲ್ಲಿದ್ದೀರಾ.. ಹಾಗಿದ್ರೆ ನಿಮಗಿದು ಗುಡ್ ನ್ಯೂಸ್: ಎಲಾನ್ ಮಸ್ಕ್ ಮಾಡಿದ್ರು ಈ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ತನ್ನ ಗ್ರಾಹಕರಿಗೆ ವಿಶೇಷ ಘೋಷಣೆ ಮಾಡಿದ್ದೂ, ಶೀಘ್ರವೇ ವಿಡಿಯೊ-ಆಡಿಯೊ ಕರೆ ಸೇವೆ ಆರಂಭಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎಲಾನ್ ಮಸ್ಕ್, ಶೀಘ್ರದಲ್ಲೇ ಟ್ವಿಟರ್ ನಲ್ಲಿ ಆಡಿಯೋ-ವಿಡಿಯೋ ಕರೆ ವೈಶಿಷ್ಟ್ಯ ಬರಲಿದೆ. iOS, Android, Mac ಮತ್ತು PC ನಲ್ಲಿಯೂ ಈ ವೈಶಿಷ್ಠ್ಯ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಯಾವುದೇ ರೀತಿಯ ಫೋನ್ ನಂಬರ್ ಸಂಖ್ಯೆಯ ಅಗತ್ಯವಿಲ್ಲ.ಎಕ್ಸ್ ಅಥವಾ ಟ್ವಿಟರ್ ಪರಿಣಾಮಕಾರಿ ಜಾಗತಿಕ ವಿಳಾಸ ಪುಸ್ತಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಎಲಾನ್ ಮಸ್ಕ್ ಅವರು ಮೈಕ್ರೋಬ್ಲಾಗಿಂಗ್ ಜಾಲತಾಣ ‘ಎಕ್ಸ್’ನಲ್ಲಿ (ಟ್ವಿಟರ್) ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಸಾಕಷ್ಟು ಬದಲಾವಣೆಗಳನ್ನು ತಂದಿದ್ದು, ಕೆಲವು ಸಮಯಗಳ ಹಿಂದೆಯಷ್ಟೇ ಎಲಾನ್ ಮಸ್ಕ್ ಅವರು ಟ್ವಿಟರ್ ಹೆಸರನ್ನು ‘ಎಕ್ಸ್’ ಎಂದು ಮರುನಾಮಕರಣ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!