Wednesday, December 6, 2023

Latest Posts

ಭಾರತಕ್ಕೆ ಬಂದು ಮಾಡಿದ ಒಂದು ಕಾಮೆಂಟ್ ಜರ್ಮನಿ ನೌಕಾ ಮುಖ್ಯಸ್ಥನ ಕೆಲಸವನ್ನೇ ತೆಗೆಯಿತು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತದ ಚಿಂತನಕೂಟದ ಸಂವಾದವೊಂದರಲ್ಲಿ ಭಾಗವಹಿಸಿದ್ದ ಜರ್ಮನಿಯ ನೌಕಾಸೋನೆ ಮುಖ್ಯಸ್ಥ ಕೆ-ಅಚಿಮ್ ಸೋನ್ಬಾಚ್, ಉಕ್ರೇನಿನ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆಯೊಂದನ್ನು ನೀಡುತ್ತ ಪರೋಕ್ಷವಾಗಿ ರಷ್ಯದ ವ್ಲಾಡಿಮಿರ್ ಪುಟಿನ್ ಅವರನ್ನು ಹೊಗಳುತ್ತಾರೆ. ಇದೀಗ, ಅವರು ತಮ್ಮ ಹುದ್ದೆಗೇ ರಾಜೀನಾಮೆ ಕೊಟ್ಟಿರುವ ವಿದ್ಯಮಾನ ವರದಿಯಾಗಿದೆ.
ಅವರು ಹೇಳಿದ್ದಿಷ್ಟು-
“ರಷ್ಯವು ಉಕ್ರೇನ್ ಅನ್ನು ಆಕ್ರಮಿಸಿಕೊಳ್ಳುತ್ತದೆ ಎಂಬುದು ವಿವೇಕವಿಲ್ಲದ ಮಾತು. ಪುಟಿನ್ ಅವರಿಗೆ ಅಂಥ ಆಕ್ರಮಣ ಮಾಡುವುದೇನೂ ಬೇಕಿಲ್ಲ. ಅವರು ಕೇವಲ ತಮಗೆ ಗೌರವ ಕೊಡಲಿ ಎಂದು ಆಶಿಸುತ್ತಿದ್ದಾರೆ. ಈ ಹಿಂದೆ ಉಕ್ರೇನಿನ ಕ್ರಿಮಿಯಾವನ್ನು ವಶಪಡಿಸಿಕೊಂಡಿದ್ದೂ ತಮಗೆ ಗೌರವ ಸಿಗಲಿಲ್ಲ ಎಂಬ ಕಾರಣಕ್ಕೆ. ಹೀಗಾಗಿ ಅವರಿಗೆ ಸಲ್ಲಬೇಕಾದ ಗೌರವ ನೀಡಿದರೆ ಅವರೇನೂ ಆಕ್ರಮಣಕ್ಕೆ ಮುಂದಾಗುವುದಿಲ್ಲ.”
ಈ ನೌಕಾ ಮುಖ್ಯಸ್ಥನ ಮಾತೇಕೆ ವಿವಾದವಾಯಿತು?
ಏಕೆಂದರೆ ಜರ್ಮನಿ ಸೇರಿದಂತೆ ಐರೋಪ್ಯ ಒಕ್ಕೂಟವು ಉಕ್ರೇನ್ ಪರವಾಗಿ ಹಾಗೂ ವ್ಲಾಡಿಮಿರ್ ಪುಟಿನ್ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಿರುವಾಗ ಜರ್ಮನಿ ನೌಕಾ ಮುಖ್ಯಸ್ಥ ಪರೋಕ್ಷವಾಗಿ ಪುಟಿನ್ ಅವರದ್ದೇನೂ ತಪ್ಪಿಲ್ಲ ಎಂದರೆ ಸಹಜವಾಗಿಯೇ ಅದು ವಿರೋಧಾಭಾಸಕ್ಕೆ ಕಾರಣವಾಗುತ್ತದಲ್ಲವೇ? ಇಲ್ಲಾಗಿರುವುದೂ ಅದೇ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!