ಎನ್‌ ಡಿಆರ್‌ಎಫ್ ನ ಟ್ವಿಟರ್‌ ಖಾತೆ ಹ್ಯಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ ಡಿಆರ್‌ಎಫ್)‌ ನ ಟ್ವಿಟರ್‌ ಖಾತೆ ಶನಿವಾರ ಹ್ಯಾಕ್‌ ಮಾಡಲಾಗಿತ್ತು ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್ ಹೇಳಿದ್ದಾರೆ.
ಎನ್‌ಡಿಆರ್‌ಎಫ್ ಟ್ವಿಟರ್ ಹ್ಯಾಂಡಲ್ ಅನ್ನು ಶನಿವಾರ ಜ. 22 ರಂದು ಹ್ಯಾಕ್ ಮಾಡಲಾಗಿದೆ. ನಾವು ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿ.ಜಿ. ಕಾರ್ವಾಲ್‌ ತಿಳಿಸಿದ್ದಾರೆ ಎಂದು ಎಎನ್‌ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹ್ಯಾಕರ‍್ಸ್ ಅಕೌಂಟ್‌ನಲ್ಲಿ ಕೆಲವು ಲಿಂಕ್‌ಗಳನ್ನು ಕೂಡ ಪೋಸ್ಟ್ ಮಾಡಿದ್ದರು. ಜತೆಗೆ ಈ ಹಿಂದೆ ಪೋಸ್ಟ್‌ ಮಾಡಲಾಗಿದ್ದ ಸಂದೇಶಗಳು ಲೋಡ್‌ ಆಗುತ್ತಿರಲಿಲ್ಲ ಎಂದು ಕರ್ವಾಲ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!