Tuesday, August 16, 2022

Latest Posts

ಮಾಜಿ ಪ್ರಧಾನಿ ದೇವೇಗೌಡರ ಕುರಿತು ನಾಲಗೆ ಹರಿಬಿಟ್ಟ ಕಾಂಗ್ರೆಸ್‌ ಮುಖಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಾಜಿ ಪ್ರಧಾನಿ ದೇವೇಗೌಡರು ಈಗ ಇಬ್ಬರ ಹೆಗಲ ಮೇಲೆ ಕೈ ಹಾಕ್ಕೊಂಡು ನಡೆಯುತ್ತಿದ್ದಾರೆ. ಸದ್ಯದಲ್ಲೇ ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್‌.ರಾಜಣ್ಣ ಹೇಳಿಕೆ ವಿವಾದಕ್ಕೆ ಸಿಲುಕಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ದೇವೇಗೌಡರು ಇಬ್ಬರ ಭುಜದ ಮೇಲೆ ಕೈ ಹಾಕಿ ನಡೆದಾಡುವ ರೀತಿ ತೋರಿಸಿ, ಹತ್ತಿರದಲ್ಲೇ ಇದೇ ರೀತಿ ನಾಲ್ವರ ಮೇಲೆ ಹೋಗಲಿದ್ದಾರೆ ಎಂದರು.

ಶೋಕಿ ಮತ್ತು ಮುಖಸ್ತುತಿಗೆ ರಾಜಕಾರಣ ಮಾಡೋದು ಬೇಡ. ನಾನು ಎಂಎಲ್ಎಯಾದರೆ, ನೀವೆಲ್ಲ (ಜನರು) ಎಂಎಲ್ಎಗಳು ಇದ್ದಂಗೆ. ಇದಕ್ಕಾಗಿ ನೀವು ಹೋರಾಟ ಮಾಡಿ. ನಾನು ಎಂಎಲ್ಎಯಾದರೆ ನಿಮ್ಮ ಕೈಗೆ ಅಧಿಕಾರ ಸಿಗುತ್ತದೆ. ನಾನು ಸುಮ್ಮನೆ ನಾಮಕಾವಾಸ್ತೆಗೆ ಇರ್ತೀನಿ. ಏನಾದರೂ ಕೆಲಸ ಆಗಬೇಕಾದರೆ ನೀವೇ ಅಧಿಕಾರಿಗಳನ್ನು ಕೇಳೋ ಶಕ್ತಿ ನಿಮಗೆ ಬರುತ್ತೆ ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss