‘ಜೈಲರ್‌ʼ ನೋಡಲು ಜಪಾನ್‌ನಿಂದ ಚೆನ್ನೈಗೆ ಬಂದ ದಂಪತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ʼಜೈಲರ್‌ʼ ನೋಡಲು ಸಾವಿರಾರು ರಜಿನಿಕಾಂತ್‌ ಫ್ಯಾನ್ಸ್‌ ಗಳು ಥಿಯೇಟರ್‌ ಮುಂಭಾಗದಲ್ಲಿ ನೆರೆದಿದ್ದಾರೆ. ‘ತಲೈವಾʼರನ್ನು ಎರಡು ವರ್ಷದ ಬಳಿಕ ಬಿಗ್‌ ಸ್ಕ್ರೀನ್‌ ನಲ್ಲಿ ನೋಡಲು ಜನ ಥಿಯೇಟರ್‌ ನತ್ತ ಹರಿದು ಬರುತ್ತಿದ್ದಾರೆ.

ʼಜೈಲರ್‌ʼ ನೋಡಲು ದೂರದ ಊರಿನಿಂದ ಬರುತ್ತಿರುವುದು ಮಾತ್ರವಲ್ಲದೇ ದೂರದ ದೇಶದಿಂದಲೂ ಬಂದಿರುವುದು ಸೋಜಿಗವಾಗಿದೆ.

ಜಪಾನ್‌ ಮೂಲದ ದಂಪತಿಗಳು ರಜಿನಿಕಾಂತ್‌ ಅವರ ʼಜೈಲರ್‌ʼ ಸಿನಿಮಾ ನೋಡಲು ಚೆನ್ನೈಗೆ ಬಂದಿದ್ದಾರೆ. ಜಪಾನ್‌ ನ ಒಸಾಕಾದಿಂದ ಚೆನ್ನೈಗೆ ಯಸುದಾ ಹಿಡೆತೋಶಿ ದಂಪತಿಗೆ ಬಂದಿದ್ದು, ʼಜೈಲರ್‌ʼಸಿನಿಮಾ ವೀಕ್ಷಿಸಿದ್ದಾರೆ.

ʼನಾವು ʼಜೈಲರ್‌ʼ ನೋಡಲು ಜಪಾನ್‌ ನಿಂದ ಚೆನ್ನೈಗೆ ಬಂದಿದ್ದೇವೆ. ನಾನು ರಜಿನಿಕಾಂತ್‌ ಅವರ ದೊಡ್ಡ ಅಭಿಮಾನಿ. ಮೊದಲಿನಿಂದಲೂ ಅವರ ಸಿನಿಮಾವನ್ನು ನೋಡುತ್ತಾ ಬಂದಿದ್ದೇನೆ ಎಂದರು. ʼಮುತ್ತುʼ (1998) ಸಿನಿಮಾದಿಂದ ಆರಂಭವಾದ ಇವರ ಅಭಿಮಾನ ಇದುವರೆಗೂ ಮುಂದುವರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!