ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಪಡೆಗಳ ಡ್ರೋನ್ ದಾಳಿಗೆ ಉಕ್ರೇನ್‌ನ ಒಡೆಸಾ ಬಂದರು ಛಿದ್ರ ಛಿದ್ರವಾಗಿದೆ. ರಾತ್ರೋರಾತ್ರಿ ಡ್ರೋನ್ ದಾಳಿ ನಡೆಸಿ ಬಂದರನ್ನು ಹಾನಿಗೊಳಿಸಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ಖಚಿತಪಡಿಸಿದರು.
ದಕ್ಷಿಣ ಒಡೆಸಾ ಪ್ರದೇಶದ ಡ್ಯಾನ್ಯೂಬ್ ನದಿಯ ಬಂದರು ಮತ್ತು ಧಾನ್ಯ ಮೂಲಸೌಕರ್ಯ ಮುಖ್ಯ ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಒಡೆಸಾ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಓಲೆಹ್ ಕಿಪರ್ ಹೇಳಿದರು. ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಘಟನೆಯಲ್ಲಿ ಧಾನ್ಯ ಮತ್ತು ಕೃಷಿ ಯಂತ್ರೋಪಕರಣಗಳಿದ್ದ ಹ್ಯಾಂಗರ್‌ಗಳು ನಾಶವಾಗಿವೆ. ಕಳೆದ ರಾತ್ರಿ ಒಡೆಸಾ ಮತ್ತು ನೆರೆಯ ಮೈಕೊಲೈವ್ ಪ್ರದೇಶದ ಮೇಲೆ 13 ಡ್ರೋನ್‌ಗಳು ದಾಳಿ ನಡೆಸಿರುವುದಾಗಿ ಉಕ್ರೇನ್‌ನ ವಾಯುಪಡೆ ಬುಧವಾರ ತಿಳಿಸಿದೆ.
ಕಳೆದ ಭಾನುವಾರವೂ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ್ದು, ಯುದ್ಧನೌಕೆಯು ಸರಕು ಹಡಗಿನ ಮೇಲೆ ಗುಂಡು ಹಾರಿಸಿತ್ತು ಎಂದು ಸಿಎನ್‌ಎನ್ ವರದಿ ಮಾಡಿದೆ.