ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಜನ್ಮಭೂಮಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯವು ಅದ್ಧೂರಿಯಾಗಿ ಸಂಪನ್ನವಾಗಿದೆ. ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಾಂಗ್ರೆಸ್ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಮನನ್ನೇ ವಿಭಜಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷದ ಮುಖಂಡರ ನಿಲುವನ್ನು ಟೀಕಿಸಿದ್ದಾರೆ. ಜಾತಿ ಎಣಿಕೆ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು. ರಾಮನನ್ನು ವಿಚಾರಣೆಗೆ ತಂದು ನಿಲ್ಲಿಸಿದ ಕಾಂಗ್ರೆಸ್ಸಿಗರು ಈಗ ಬಣ್ಣ ಬದಲಿಸಿದ ಗೋಸುಂಬೆಗಳಾಗಿದ್ದಾರೆ.
ರಾಮ ರಾಜ್ಯದ ಕನಸು ನಮ್ಮ ಗ್ಯಾರಂಟಿಗಳಿಂದ ನನಸು” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟರ್‌ನಲ್ಲಿ ಹಾಕಿಕೊಂಡಿದ್ದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರಲ್ಹಾದ್ ಜೋಶಿ, ಈಗ ರಾಮ ನೆನಪಾದನೇ? ಎಂದು ಪ್ರಶ್ನೆ ಮಾಡಿದ್ದಾರೆ.