ಕಾಸರಗೋಡು ಜಿಲ್ಲೆಯ ಜನನಿಬಿಡ ಸ್ಥಳದಲ್ಲಿ ನೆಲಕ್ಕೆ ಅಪ್ಪಳಿಸಿದ ಡ್ರೋನ್: ನಿಗೂಢತೆ ಬೇಧಿಸಿದ ಪೊಲೀಸರು!

ಹೊಸ ದಿಗಂತ ಡಿಜಿಟಲ್, ಮಂಗಳೂರು:

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಚಿಗುರುಪಾದೆ ಎಂಬಲ್ಲಿ ವಿಮಾನ ಆಕಾರದ ಡ್ರೋನ್ ಒಂದು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕಕ್ಕೆ ಮೂಡಿಸಿದ ವಿದ್ಯಮಾನ ನಡೆದಿದೆ.

ಜನನಿಬಿಡ ಪ್ರದೇಶದಲ್ಲಿಯೇ ಈ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದ ಈ ಡ್ರೋನ್, ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಡ್ರೋನ್ ಸ್ವಾಧೀನ ಪಡೆದು ವಿಚಾರಣೆ ಕೈಗೆತ್ತಿಕೊಂಡಿದ್ದರು.

ಈ ವೇಳೆ ಡ್ರೋನ್‌ ಗೇಲ್ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಗ್ಯಾಸ್ ಪೈಪ್‌ಲೈನ್‌ನ ಸಮೀಕ್ಷೆ ನಡೆಸುತ್ತಿದ್ದಾಗ ಡ್ರೋನ್ ಜಿಪಿಎಸ್ ಸಂಪರ್ಕವನ್ನು ಕಳೆದುಕೊಂಡು ಈ ಭಾಗದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ಬಳಿಕ ಕಂಪನಿ ಅಧಿಕಾರಿಗಳು ಡ್ರೋನ್ ಅನ್ನು ಹಿಂಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!