Saturday, February 4, 2023

Latest Posts

VIRAL VIDEO| ಪಠಾಣ್ ಸಿನಿಮಾ ಟಿಕೆಟ್ ಕೊಡಿ..ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿನಿಮಾ ನಾಯಕರಿಗಾಗಿ ಅಭಿಮಾನಿಗಳು ತಮ್ಮ ಪ್ರೀತಿಯನ್ನು ವಿಭಿನ್ನವಾಗಿ ತೋರಿಸುತ್ತಾರೆ. ಕೆಲವರು ಆ ಅಭಿಮಾನವನ್ನು ಹುಚ್ಚು ಹುಚ್ಚಾಗಿ ಪ್ರದರ್ಶಿಸುತ್ತಾರೆ. ತಮ್ಮ ಹೀರೋಗಳಿಗೆ ಪಾದಯಾತ್ರೆ, ಸಿನಿಮಾ ರಿಲೀಸ್‌ ವೇಳೆ, ಹಾಲಿನಭಿಷೇಕ, ಅನ್ನದಾನ ಇಂತಹ ಸಮಾಜಮುಖಿ ಕಾರ್ಯಗಳಾದರೆ ಮೆಚ್ಚುವಂಥದ್ದು. ಆದರೆ, ಇವರ ಅಭಿಮಾನ ಅತಿರೇಖಕ್ಕೆ ಹೋಗಿ ಪ್ರಾಣಕ್ಕೆ ಹಾನಿ ಮಾಡಿಕೊಂಡಿರುವ ಪ್ರಸಂಗಗಳೂ ಇವೆ. ಇದೀಗ ಇಂತಹ ವಿಡಿಯೋವೊಂದನ್ನು ಶಾರುಖ್ ಅಭಿಮಾನಿಯೊಬ್ಬರು ಶೇರ್ ಮಾಡಿದ್ದಾರೆ.

ಈ ವಿಡಿಯೋದಲ್ಲಿರುವ ರಿಯಾನ್..ನಾನು ಶಾರುಖ್ ಅವರ ದೊಡ್ಡ ಅಭಿಮಾನಿ. ಪಠಾಣ್ ಬಿಡುಗಡೆಯಾದ ಜನವರಿ 25ರಂದು ಸಿನಿಮಾ ನೋಡಬೇಕು. ಶಾರುಖ್ ಅವರನ್ನು ಭೇಟಿ ಮಾಡಬೇಕು. ಆದರೆ ಸಿನಿಮಾ ಟಿಕೆಟ್ ಖರೀದಿಸಲು ನನ್ನ ಬಳಿ ಹಣವಿಲ್ಲ. ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ. ಪಠಾಣ್ ಚಲನಚಿತ್ರ ಟಿಕೆಟ್ ಕೊಡಿಸಿ ಇಲ್ಲದಿದ್ದರೆ ಈ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿಡಿಯೋ ಮಾಡಿದ್ದಾರೆ.

ಸುಮಾರು ಐದು ವರ್ಷಗಳ ಗ್ಯಾಪ್ ನಂತರ ಶಾರುಖ್ ಖಾನ್ ಪಠಾಣ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಆಕ್ಷನ್ ಎಂಟರ್ಟೈನರ್ ಆಗಿರುವ ಪಠಾಣ್ ಚಿತ್ರದಲ್ಲಿ ಶಾರುಖ್ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ನಟಿಸುತ್ತಿದ್ದು, ಜಾನ್ ಅಬ್ರಹಾಂ ಖಳನಾಯಕನಾಗಿ ನಟಿಸುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ ಜನವರಿ 25 ರಂದು ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!