Wednesday, June 7, 2023

Latest Posts

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಮಂತಾಗೆ ಸ್ಪೆಷಲ್ ಗಿಫ್ಟ್ ನೀಡಿದ ಅಭಿಮಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್ ನಟಿ ಸಮಂತಾಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಕ್ಷಣ ಅವರ ಅಭಿಮಾನಿಯೊಬ್ಬರು ದೇಗುಲ ಕಟ್ಟಿ ಉದ್ಘಾಟಿಸುವ ಮೂಲಕ ನೆಚ್ಚಿನ ನಟಿಗೆ ಹುಟ್ಟುಹಬ್ಬದ ಗಿಫ್ಟ್ ನೀಡಿದ್ದಾರೆ.

ಈಗಾಗಲೇ ನಾವು ಖುಷ್ಬು, ನಿಧಿ ಅಗರ್ವಾಲ್ ಮತ್ತು ಹನ್ಸಿಕಾ ಅವರಿಗೆ ತಮಿಳುನಾಡಿನಲ್ಲಿ ಅಭಿಮಾನಿಗಳು ದೇವಾಲಯಗಳನ್ನು ಕಟ್ಟಿದ್ದ ಸುದ್ದಿ ಕೇಳಿದ್ದೇವೆ. ಇದೀಗ ಸಮಂತಾ ಅವರಿಗೂ ಅಭಿಮಾನಿ ದೇಗುಲ ಕಟ್ಟಿದ್ದಾರೆ.

ಇತ್ತೀಚೆಗೆ ಪೌರಾಣಿಕ ಚಿತ್ರ ಶಾಂಕುಂತಲಂನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಅವರನ್ನು ಗೌರವಿಸಲು ಬಾಪಟ್ಲ ನಿವಾಸಿ ತೆನಾಲಿ ಸಂದೀಪ್ ಅವರು ದೇವಾಲಯವನ್ನು ನಿರ್ಮಿಸಿದ್ದಾರೆ. ಅವರು ಆಲಪಾಡು ಗ್ರಾಮದ ತಮ್ಮ ಮನೆಯ ಸಮೀಪದಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ಸಮಂತಾ ಹುಟ್ಟುಹಬ್ಬದ ಅಂಗವಾಗಿ ಶುಕ್ರವಾರ (ಏಪ್ರಿಲ್ 28) ಉದ್ಘಾಟನೆ ಮಾಡಿದ್ದಾರೆ. ನಟಿಯ ಪ್ರತಿಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃತ್ತಿಯಲ್ಲಿ ಕಾರ್ ಡ್ರೈವರ್ ಆಗಿರುವ ಸಂದೀಪ್ ಅವರು ಸಮಂತಾಗೆ ಮೈಯೋಸಿಟಿಸ್ ಇರುವುದು ಪತ್ತೆಯಾದ ನಂತರ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಲು ತಿರುಪತಿ, ಚೆನ್ನೈ ಮತ್ತು ನಾಗಪಟ್ಟಣಂಗಳಿಗೆ ತೀರ್ಥಯಾತ್ರೆ ಕೈಗೊಂಡಿದ್ದರು.

ನಾನು ಸಮಂತಾ ಅವರ ವೃತ್ತಿ ಜೀವನದ ಆರಂಭದಿಂದಲೂ ಅವರ ಅಭಿಮಾನಿಯಾಗಿದ್ದೇನೆ, ಆದರೆ ನನಗೆ ಸ್ಫೂರ್ತಿ ನೀಡಿದ್ದು ಅವರ ಸಂವೇದನೆ ಮತ್ತು ದಯೆ. ಅವರು ಪ್ರತ್ಯುಷಾ ಫೌಂಡೇಶನ್ ಮೂಲಕ ಹಲವಾರು ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡಿದ್ದಾರೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!