ಗೂಗಲ್‌ ನಿಂದಲೂ ಬರ್ತಿದೆ ಫೋಲ್ಡೆಬಲ್‌ ಫೋನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದಿನದಿನವೂ ಜಗತ್ತು ತನ್ನನ್ನು ಹೊಸತರತ್ತ ತೆರೆದುಕೊಳ್ಳುತ್ತಲೇ ಇರುತ್ತದೆ. ಈ ಯುಗದ ಆವಿಷ್ಕಾರಗಳಲ್ಲೊಂದಾದ ಸ್ಮಾರ್ಟ್ ಫೋನ್‌ ಗಳೂ ಇದರಿಂದ ಹೊಸತೇನಲ್ಲ. ವಿಧ ವಿಧ ವಿನ್ಯಾಸಗಳ ಹೊಸ ಸ್ಮಾರ್ಟ್‌ ಫೋನ್‌ ಗಳು ನಿತ್ಯವೂ ಮಾರುಕಟ್ಟೆಗೆ ಕಾಲಿರಿಸುತ್ತವೆ. ಇವುಗಳಲ್ಲಿ ಸದ್ಯ ಎಲ್ಲರ ಗಮನ ಸೆಳೆಯುತ್ತಿರುವ ವಿನ್ಯಾಸವೆಂದರೆ ಅದು ಫೋಲ್ಡೇಬಲ್‌ ಸ್ಮಾರ್ಟ್‌ ಫೋನ್.‌ ಬೇಕಾದ ಬಿಡಿಸಿಕೊಂಡು ಮತ್ತೆ ಚಿಕ್ಕ ಗಾತ್ರಕ್ಕೆ ಮಡಚಿಕೊಳ್ಳಬಹುದಾದ ಸ್ಮಾರ್ಟ್‌ ಫೋನ್‌ ಅನ್ನು ಎಲ್ಲರೂ ನೆಚ್ಚಿಕೊಳ್ಳುತ್ತಿದ್ದಾರೆ.

ಹಾಗಾಗಿ ಈ ಸ್ಮಾರ್ಟಫೋನ್‌ ಗೆ ಬೇಡಿಕೆಯೂ ನಿಧಾನವಾಗಿ ಹೆಚ್ಚುತ್ತಿದೆ. ಸ್ಯಾಮಸಂಗ್‌ ಕಂಪನಿಯ ಪೋಲ್ಡೆಬಲ್‌ ಗ್ಯಾಲಕ್ಸಿ Zಫೋಲ್ಡ್‌ ಈಗಾಗಲೇ ಮಾರುಕಟ್ಟೆಯಲ್ಲಿದೆ. ಪ್ರಸ್ತುತ ಟೆಕ್‌ ದಿಗ್ಗಜ ಗೂಗಲ್‌ ಕೂಡ ಮಡಚುವ ಸ್ಮಾರ್ಟ್‌ಪೋನ್‌ ಅನ್ನು ಆವಿಷ್ಕರಿಸಿಲಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಗೂಗಲ್ ತನ್ನ ಮಡಚಬಹುದಾದ ಫೋನ್‌ ವಿಷಯದಲ್ಲಿ ಕಾರ್ಯ ನಿರತವಾಗಿದ್ದು 2019ರಲ್ಲೇ ಈ ಕುರಿತು ಗೂಗಲ್‌ ಅಧಿಕೃತ ಘೋಷಣೆಯನ್ನೂ ನೀಡಿತ್ತು.

ಇದೀಗ ಈ ವಿಷಯದಲ್ಲಿ ಗೂಗಲ್‌ ತರಲಿಕ್ಕೆ ಹೊರಟಿರೋ ಫೋಲ್ಡೆಬಲ್‌ ಸ್ಮಾರ್ಟ್‌ ಪೋನ್‌ನ ನಿರೀಕ್ಷಿತ ವಿನ್ಯಾಸವು ಬಹಿರಂಗವಾಗಿದೆ. ಪಿಕ್ಸೆಲ್ ನೋಟ್‌ಪ್ಯಾಡ್ ಅಥವಾ ಪಿಕ್ಸೆಲ್ ಫೋಲ್ಡ್ ಎಂದು ಹೆಸರಿನಲ್ಲಿ ಗೂಗಲ್ ಅದಾಗಲೇ ಪೇಟೆಂಟ್‌ ಪಡೆದುಕೊಂಡಿದ್ದು ಈಗ ಅದರ ವಿನ್ಯಾಸ ಹೇಗಿರಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಇದು Galaxy Z ಫೋಲ್ಡ್‌ ಅನ್ನು ಅಲ್ಪವಾಗಿ ಹೋಲುತ್ತದೆ ಎನ್ನಲಾಗಿದ್ದು ಸಾಧನವು ಗಣನೀಯವಾಗಿ ದಪ್ಪವಾದ ಬೆಜೆಲ್‌ಗಳನ್ನು ಹೊಂದಿರುವಂತೆ ತೋರುತ್ತಿದೆ. ಇದು ಅರ್ಧದಷ್ಟು ಮಡಚಿಕೊಳ್ಳುವ ಸಾಮರ್ಥ್ಯ ಹೊಂದಿದೆ. Galaxy Z ಫೋಲ್ಡ್ 4 ನಂತೆಯೇ ಪಿಕ್ಸೆಲ್‌ ಫೋಲ್ಡ್‌ ಬಗ್ಗೆಯೂ ಜನರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಸಾಧನವು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಸಾಧನದ ವಿನ್ಯಾಸ ಮತ್ತು ವಿಶೇಷಣಗಳು ಆ ಹೊತ್ತಿಗೆ ಬದಲಾಗಬಹುದು ಎನ್ನಲಾಗಿದೆ ಗೂಗಲ್‌ನಿಂದ ಫೋಲ್ಡಬಲ್ ಫೋನ್‌ನ ಪರಿಚಯವು ಫೋಲ್ಡಬಲ್ ಫೋನ್‌ಗಳ ವಿಭಾಗದಲ್ಲಿ ಸ್ಪರ್ಧೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದು ಪ್ರಸ್ತುತ ಫೋಲ್ಡಬಲ್ ಫೋನ್‌ಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಕೊರಿಯನ್ ದೈತ್ಯ Samsung ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!