ಮದುವೆ ಸಮಯದಲ್ಲಿ ಮಾಡಿದ ಒಪ್ಪಂದಕ್ಕೆ ಪಿಜ್ಜಾಹಟ್ ನಿಂದ ಬಂತು ಉಡುಗೊರೆ: ಪ್ರತಿ ತಿಂಗಳು ಮನೆಗೆ ಬರುತ್ತೆ ಉಚಿತ ಫಿಜ್ಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲ ದಿನಗಳ ಹಿಂದೆ ಜೋಡಿಯೊಂದು ತಮ್ಮ ಮದುವೆಯಲ್ಲಿ ದಿನ ವಿಶೇಷ ಕುತೂಹಲದ ಒಪ್ಪಂದಕ್ಕೆ ಸಹಿ ಹಾಕಿದ್ದು ಭಾರಿ ಸುದ್ದಿಯಾಗಿತ್ತು.

ಆ ಒಪ್ಪಂದದಂತೆ ವಧುವೊಬ್ಬಳು ಪ್ರತಿದಿನವೂ ಜಿಮ್‌ಗೆ ಹೋಗುವುದು, ಪ್ರತಿ 15 ದಿನಕ್ಕೊಮ್ಮೆ ಶಾಪಿಂಗ್ ಹೋಗುವುದು. ಪ್ರತಿ ತಿಂಗಳಿಗೊಮ್ಮೆ ಫಿಜ್ಜಾ ತಿನ್ನುವುದು ಎಂಬ ತಮಾಷೆಯ ಒಪ್ಪಂದವೊಂದಕ್ಕೆ ತನ್ನ ಗಂಡನಿಂದ ಆಕೆ ಸಹಿ ಹಾಕಿಸಿಕೊಂಡಿದ್ದಳು.

ಅಸ್ಸಾಂ ನ ಶಾಂತಿ ಪ್ರಸಾದ್ ಮತ್ತು ಮಿಂಟು ರೈ ಎಂಬವರು ಕಳೆದ ಜೂನ್ 21 ರಂದು ವಿವಾಹವಾಗಿದ್ದಾರೆ. ಮದುವೆಯ ಸಂದರ್ಭದಲ್ಲಿ ಮಿಂಟು ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದರು. ಇದು ವೈರಲ್​ ಆಗುತ್ತಿದ್ದಂತೆಯೇ ಪಿಜ್ಜಾ ಹಟ್ ಇಂಡಿಯಾ ದಂಪತಿಗೆ ತಿಂಗಳಿಗೊಮ್ಮೆ ಉಚಿತ ಪಿಜ್ಜಾಗಳನ್ನು ಇಡೀ ವರ್ಷಕ್ಕೆ ನೀಡುವುದಾಗಿ ಘೋಷಿಸಿತ್ತು. ಅದರಂತೆಯೇ ಇದೀಗ ಪಿಜ್ಜಾ ಹಟ್ ಇಂಡಿಯಾ ಕರ್ವಾಚೌತ್​ ನಿಮಿತ್ತ ನೀಡಿರುವ ಪಿಜ್ಜಾವನ್ನು ದಂಪತಿ ಸವಿಯುತ್ತಿದ್ದಾರೆ. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಿಮ್ಮ ಪತಿಯೊಂದಿಗೆ ದೀರ್ಘ ಮತ್ತು ಸಂತೋಷದ ಜೀವನಕ್ಕಾಗಿ ತಿಂಗಳಿಗೊಂದು ಪಿಜ್ಜಾ! ಅದಕ್ಕಾಗಿಯೇ ನಾವು ಜೀವಿಸುತ್ತಿದ್ದೇವೆ. ಎಲ್ಲಾ ಪಿಜ್ಜಾ-ಪ್ರೀತಿಯ ಸಂತೋಷದ ದಂಪತಿಗೆ, ಕರ್ವಾಚೌತ್​ ಶುಭಾಶಯಗಳು(#HappyKarvaChauth)” ಎಂದು ಪಿಜ್ಜಾ ಹಟ್ ಇಂಡಿಯಾ ಹೇಳಿದ್ದು ಇದರ ಫೋಟೋ ವೈರಲ್​ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!