ಮಾಸ್‌ ಹೀರೋಗೆ ಮೊಣಕಾಲಿನ ಮೇಲೆ ಕೂತು ಪ್ರಪೋಸ್‌ ಮಾಡಿ ಉಂಗುರ ತೊಡಿಸಿದ ಯುವತಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಪುರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯದ ಲೈಗರ್ ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಚಾರದ ಭಾಗವಾಗಿ ಚಿತ್ರತಂಡ ಭಾರತದಾದ್ಯಂತ ಪ್ರವಾಸ ಮಾಡುತ್ತಿದೆ. ವಿಜಯ್‌ಗೆ ಹೆಚ್ಚಾಗಿ ಹುಡುಗಿಯರ ಫ್ಯಾನ್ ಫಾಲೋಯಿಂಗ್ ಇದೆ. ಇತ್ತೀಚೆಗೆ ಹುಡುಗಿಯೊಬ್ಬಳು ವಿಜಯ್ ಫೋಟೋವನ್ನು ತನ್ನ ಬೆನ್ನ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ಲೈಗರ್ ಟೀಮ್ ಮೊನ್ನೆ ಬೆಂಗಳೂರಿಗೆ ಬಂದಾಗ ಯುವತಿ ಮೊಣಕಾಲಿನ ಮೇಲೆ ಪ್ರಪೋಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

ತೇಜು ಎಂಬ ಯುವತಿ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ತನ್ನ ನೆಚ್ಚಿನ ನಾಯಕನನ್ನು ನೋಡಿ ಭಾವುಕರಾಗಿ ಕಣ್ಣೀರು ಹಾಕಿದರು. ಮೊಣಕಾಲಿನ ಮೇಲೆ ಕುಳಿತು ವಿಜಯ್ ನ ಬೆರಳಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದಳು. ಭಾವುಕಳಾದ ಯುವತಿಯನ್ನು ವಿಜಯ್ ಅಪ್ಪಿಕೊಂಡು ಸಮಾಧಾನ ಹೇಳಿದರು. ‘ಲೈಗರ್’ ಸಿನಿಮಾದ ಪ್ರಮೋಷನ್ಸ್ ಮುಗಿಯುವವರೆಗೂ ರಿಂಗ್ ತೆಗೆಯುವುದಿಲ್ಲ ಎಂದು ವಿಜಯ್‌ ದೇವರಕೊಂಡ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!