October 9, 2026
Friday, October 9, 2026
spot_img

ಇದ್ದಕ್ಕಿದ್ದಂತೆಯೇ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ ಕಂದಮ್ಮ! ಎಕ್ಸ್‌ಪೈರಿ ಆದ ಮೆಡಿಸಿನ್‌ ನೀಡಿದ ವೈದ್ಯರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊನ್ನಾಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಹನ್ನೊಂದು ತಿಂಗಳ ಮಗು ಮೃತಪಟ್ಟಿದ್ದು, ಎಕ್ಸ್‌ಪೈರ್‌ ಆಗಿರುವ ಔಷಧವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಹನುಮನಹಳ್ಳಿ ಗ್ರಾಮದ ವಸುಂಧರ ಹಾಗೂ ಲೋಕೇಶ್‌ ದಂಪತಿಯ ಹನ್ನೊಂದು ತಿಂಗಳ ಕಂದ ಪೂರ್ವಿಕಾ ಮೃತರು. ಅನಾರೋಗ್ಯದ ಹಿನ್ನೆಲೆ ಸಾಸ್ವೆಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಔಷಧ ಕೊಟ್ಟ ತಕ್ಷಣ ಆರೋಗ್ಯದಲ್ಲಿ ಏರುಪೇರಾಗಿದೆ.

ಔಷಧ ಹಾಕಿದ ಕೆಲವೇ ಕ್ಷಣದಲ್ಲಿ ಮಗು ಮೃತಪಟ್ಟಿದೆ. ಆಸ್ಪತ್ರೆಯ ಮುಂದೆಯೇ ಪೋಷಕರು ಕಣ್ಣೀರಿನ ಜೊತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ವೈದ್ಯರು ಯಾವ ಔಷಧ ಕೊಟ್ಟರೂ ಒಮ್ಮೆ ಕಣ್ಣಾರೆ ಅವಧಿ ಮುಗಿದಿದೆಯೋ ಇಲ್ಲವೋ ನೋಡಿಕೊಳ್ಳಿ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

Must Read