ಮಹಾ ಸಾಂಘಿಕ-ಸಹ ಭೋಜನ ಕಾಯ೯ಕ್ರಮ | ಭಾರತ ಬಗ್ಗೆ ಜಗತ್ತಿನಲ್ಲಿ ಭಕ್ತಿಯ ಭಾವ: ಚೆನ್ನಾರೆಡ್ಡಿ

ಹೊಸದಿಗಂತ ವರದಿ,ಕಲಬುರಗಿ:

ಸತತವಾಗಿ 97 ವಷ೯ಗಳಿಂದ ರಾಷ್ಟ್ರ ಕಾಯ೯ದಲ್ಲಿ ತೊಡಗಿಸಿಕೊಂಡಿರುವ ಸಂಘದ ಕಾಯ೯ದ ಬಗ್ಗೆ ಜಗತ್ತಿನಲ್ಲಿ ಭಕ್ತಿಯ ಜನ್ಮತಾಳಿದೆ ಎಂದು ಕನಾ೯ಟಕ ಉತ್ತರ ಪ್ರಾಂತ್ಯದ ಶಾರೀರಿಕ ಪ್ರಮುಖರಾದ ನಾಗೇಶ್ ಚೆನ್ನಾರೆಡ್ಡಿ ತಿಳಿಸಿದರು.

ಭಾನುವಾರ ನಗರದ ಶರಣಬಸವೇಶ್ವರ ವಿಶ್ವವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದ ವತಿಯಿಂದ ಆಯೋಜಿಸಿದ್ದ ಮಹಾ ಸಾಂಘಿಕ ಸಹ ಭೋಜನ ಕಾಯ೯ಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದರು.

ಸಂಘವು 1925 ರಿಂದ ಪ್ರಾರಂಭವಾಗಿ,ಒಂದೇ ಧ್ಯೇಯದೊಂದಿಗೆ ಮುನ್ನುಗ್ಗಿ, ಸಮಾಜ ಕಾಯ೯ದ ಜೊತೆ ಜೊತೆಗೆ ಸಂಘದ ಶಾಖೆಗಳಲ್ಲಿ ವ್ಯಕ್ತಿ ನಿಮಾ೯ಣದ ಕಾಯ೯ ಸತತವಾಗಿ ಮಾಡುತ್ತಿದೆ. ದೇಶವನ್ನು ಪರಮ ವೈಭವಕ್ಕೆ ಒಯ್ಯುವುದೊಂದೆ ಸಂಘದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

ಆತ್ಮ ವಿಸ್ಮಮೃತವಾದ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಂಘವನ್ನು ಡಾಕ್ಟರ್ ಜೀ ಪ್ರಾರಂಭ ಮಾಡಿದ್ದು, ಹಿಂದು ಸಮಾಜದ ಅರಿವು ಮಾಡುವ ಮೂಲಕ ನಿರಂತರವಾಗಿ ತನ್ನ ಕಾಯ೯ವನ್ನು ವಿಸ್ತರಣೆ ಮಾಡುತ್ತಿದೆ.ಭಾರತವು ಸಶಸ್ತ್ರ ರಾಷ್ಟ್ರ ನಿಮಾ೯ಣದ ಜೊತೆಗೆ ಜಗತ್ ಕಲ್ಯಾಣ ಎಂಬ ಸಂಕಲ್ಪ ಹೊಂದಿದೆ ಎಂದರು.

ಸಾಮಾಜಿಕ ಶಕ್ತಿ ಮೇಲೆದ್ದಾಗ ಮಾತ್ರ, ರಾಜಕೀಯ ಶಕ್ತಿ ಉತ್ತುಂಗಕ್ಕೆ ಏರಲಿದೆ ಎಂದ ಅವರು,ಸಂಘದ ಸ್ವಯಂಸೇವಕ ಸ್ವಂತದ ಚಿಂತಯ ಜೊತೆ ಜೊತೆಗೆ ಸಮಾಜದ ಬಗ್ಗೆ ಸಹ ಚಿಂತನೆ ಮಾಡಬೇಕಾಗಿದೆ.ಭಾರತ ಸ್ವೀಕಾರದ ಮನೋಭಾವ ಹೊಂದಿದ ದೇಶವಾಗಿದ್ದು,ಶತ್ರುಗಳ ಶಕ್ತಿಯನ್ನು ಸಹ ಸ್ವೀಕರಿಸುವ ಶಕ್ತಿ ಹೊಂದಿದೆ ಎಂದರು.

ಮಹಾ ಸಾಂಘಿಕ ಸಹ ಭೋಜನ ಕಾಯ೯ಕ್ರಮದಲ್ಲಿ 1250 ಕ್ಕೂ ಅಧಿಕ ಸ್ವಯಂಸೇವಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಾಂತ ಸಂಘಚಾಲಕರಾದ ಖಗೇಶನ್ ಪಟ್ಟಣಶೆಟ್ಟಿ, ಜಿಲ್ಲಾ ಸಂಘಚಾಲಕರಾದ ಅಶೋಕ ಪಾಟೀಲ್ ಇದ್ದರು. ಸ್ವಾಗತ ಪರಿಚಯ ಆದಶ೯ ಜೋಶಿ,ನಿವ೯ಹಣೆ ಡಾ.ನಾಗರಾಜ್ ಪಾಟೀಲ್, ವ್ಯಯಕ್ತೀಕ ಗೀತೆ ಮುರಳಿ ಪೂಜಾರ್,ವಂದನಾರ್ಪಣೆ ಧಶರಥ ಅವರಳ್ಳಿ ನಡೆಸಿಕೊಟ್ಟರು‌.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!