ಮೇಕೆ-ಟಗರುಗಳನ್ನು ಕೊಂದು ಹಾಕಿದ ನಾಯಿಗಳ ಹಿಂಡು!

ಹೊಸದಿಗಂತ ವರದಿ,ಶ್ರೀರಂಗಪಟ್ಟಣ :

ಬೀದಿ ನಾಯಿಗಳ ಹಿಂಡು ದಾಳಿ ಮಾಡಿ 5 ಮೇಕೆಗಳು ಹಾಗೂ 1 ಟಗರನ್ನು ಕೊಂದು ಹಾಕಿರುವ ಘನಟೆ ತಾಲೂಕಿನ ದೊಡ್ಡಗೌಡನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಾಂಡು ಎಂಬುವರು ಗ್ರಾಮದ ಹೊರವಲಯದ ತಮ್ಮ ತೋಟದ ಮನೆಯಲ್ಲಿ ಕಟ್ಟಿಹಾಕಿದ್ದ ವೇಳೆ ನಾಯಿಗಳ ಹಿಂಡು ದಾಳಿ ನಡೆಸಿ 6 ರಾಸುಗಳನ್ನ ಕೊಂದಿ ಹಾಕಿವೆ. ರೈತ ಪಾಂಡು ಗುರುವಾರ ಸಂಜೆ ಕಾರ್ಯನಿಮಿತ್ತ ಶ್ರೀರಂಗಪಟ್ಟಣಕ್ಕೆ ತೆರಳಿದ್ದರು. ಪುತ್ರ ಪ್ರದೀಪ್ ಮೇಕೆಗಳನ್ನು ತೋಟದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಮನೆಗೆ ತೆರಳಿದ್ದರು. ಈ ವೇಳೆ ನಾಯಿಗಳ ಹಿಂಡು ದಾಳಿ ನಡೆಸಿ ಮಾಡಿ ಕೊಂದು ಹಾಕಿವೆ. ಇದನ್ನು ಗಮನಿಸಿದ ಭಾಗ್ಯಮ್ಮ ಎಂಬವರು ನಾಯಿಗಳನ್ನು ಓಡಿಸಲು ಮುಂದಾದಾಗ ಅವರ ಮೇಲೂ ಎರಗಲು ಮುಂದಾಗಿವೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ರಾಘವೇಂದ್ರ ಪರಿಶೀಲಿಸಿ, ಪಂಚನಾಮೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!