Friday, June 9, 2023

Latest Posts

ಮುಂಡಗೋಡದಲ್ಲಿ 8 ಸಾವಿರ ಯುವ ಕಾರ್ಯಕರ್ತರ ಬೃಹತ್ ರೋಡ್ ಶೋ

ಹೊಸದಿಗಂತ ವರದಿ ಮುಂಡಗೋಡ:

ಭಾರತೀಯ ಜನತಾ ಪಕ್ಷ ಮುಂಡಗೋಡ ಮಂಡಲದ ವತಿಯಿಂದ ಆಯೋಜಿಸಿದ್ದ ಬೃಹತ್ ಬೈಕ್ ರ್ಯಾಲಿಯಲ್ಲಿ ತಾಲೂಕಿನ ಸುಮಾರು 8,000 ಯುವ ಕಾರ್ಯಕರ್ತರು ಸೋಮಾವರ ಬೃಹತ್ ಬೈಕ್ ಯಾರ್ಲಿಯಲ್ಲಿ ಪಾಲ್ಗೊಂಡರು.

ಈ ಬೃಹತ್ ಸಮಾವೇಶಕ್ಕೆ ಮುಂಡಗೋಡ ತಾಲೂಕಿನಾದ್ಯಂತ ಸುಮಾರು 15 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಆಗಮಿಸಿದ್ದರು.  ಕಾರ್ಯಕ್ರಮದ ಪೂರ್ವದಲ್ಲಿ 8 ಸಾವಿರಕ್ಕೂ ಹೆಚ್ಚಿನ ಯುವ ಕಾರ್ಯಕರ್ತರು ಬೈಕ್ ಯಾರ್ಲಿ ಮೂಲಕವಾಗಿ ಸಚಿವರನ್ನು ಸ್ವಾಗತಿಸಿದರು.
ಮಾಜಿ ಸಚಿವರಾದ ಜಗದೀಶ್ ಶೆಟ್ಟರ್, ಸಚಿವ ಶಿವರಾಮ ಹೆಬ್ಬಾರ್ ಅವರನ್ನು ತೆರೆದ ವಾಹನದ ಮೂಲಕವಾಗಿ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಕಾರ್ಯಕರ್ತರು ಬೃಹತ್ ರೋಡ್ ಶೋ ಮೂಲಕವಾಗಿ ಸಮಾವೇಶ ನಡೆಯುವ ಮೈದಾನವರಿಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಯುವನಾಯಕರಾದ ವಿವೇಕ್ ಹೆಬ್ಬಾರ್, ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಜಿಲ್ಲಾಪಂಚಾಯತ ಮಾಜಿ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ಪ್ರಮುಖರಾದ ಉಮೇಶ್ ಬಿಜಾಪುರ, ಗುಡ್ಡಪ್ಪ ಕಾತೂರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ದೇವು ಪಾಟೀಲ್, ಹಾಲಪ್ಪ ಕೊಡನವರ್, ಕೆ.ಸಿ.ಗಲಭಿ ಸೇರಿದಂತೆ ಶಕ್ತಿ ಕೇಂದ್ರದ ಅಧ್ಯಕ್ಷರು, ಪಕ್ಷದ ವಿವಿಧಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!