14 ಸಿಂಹಗಳ ವಿರುದ್ಧ ಹೋರಾಡಿ ಗೆದ್ದ ಒಂಟಿ ಸಲಗ- ವೈರಲ್‌ ವೀಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸಿಂಹನೆಂದರೆ ಕಾಡಿನ ರಾಜನೆಂದು ಬಹುತೇಕರು ಒಪ್ಪಿಕೊಳ್ಳುತ್ತಾರೆ. ತನ್ನ ಪಂಜನ್ನು ಎತ್ತಿ ಹೊಡೆದರೆ 1.5ಟನ್‌ ತಾಕತ್ತಿರುತ್ತೆ ಎಂಬ ಕೆಂಪೇಗೌಡ ಚಿತ್ರದ ಡೈಲಾಗ್‌ ಅನ್ನೂ ಕೂಡ ಕೇಳಿಯೇ ಇರುತ್ತೇವೆ. ಆದರೆ ಇಲ್ಲೊಂದು ವೈರುಧ್ಯದ ಘಟನೆಯೊಂದು ನಡೆದಿದೆ.

ತನ್ನನ್ನು ಬೇಟೆಯಾಡಲು ಬಂದ ಒಂದಲ್ಲ ಎರಡಲ್ಲ ಬರೋಬ್ಬರಿ 14 ಸಿಂಹಗಳೊಂದಿಗೆ ಒಂಟಿ ಸಲಗವೊಂದು ಕಾದಾಡಿದೆ. ಸೆಣಸಾಡಿರುವುದೊಂದೇ ಅಲ್ಲ ಅವುಗಳನ್ನು ಹಿಮ್ಮೆಟ್ಟಿಸಿ ಪ್ರಾಣವುಳಿಸಿಕೊಂಡಿದೆ. ಆಹಾರಕ್ಕಾಗಿ ಆನೆಯನ್ನು ಬೆನ್ನತ್ತಿ ಹೊರಟ ಸಿಂಹಗಳ ಸೋಲೊಪ್ಪಿಕೊಂಡು ಆನೆಗೆ ಶರಣಾಗಿದ್ದಾರೆ. ಸಿಂಹಗಳು ಆನೆಯನ್ನು ಬೇಟೆಯಾಡಲು ಸಾಧ್ಯವೇ ಇಲ್ಲ ಎಂದಲ್ಲ. ಭಾರೀ ಗಾತ್ರದ ಆನೆಯನ್ನು ಸಿಂಹಗಳು ನೆಲಕ್ಕುರುಳಿಸುತ್ತವೆ. ಆದರೆ ಈ ಆನೆಯ ಸೆಣಸಾಡಿದ ರೀತಿಗೆ ಸಿಂಹಗಳು ಮಣಿದಿವೆ.

ಭಾರತೀಯ ಅರಣ್ಯ ಸೇವೆಯ ಅಧಿಕಾರಿಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಈ ಸಲಗನ ಸೆಣೆಸಾಟ ನೋಡಿದರೆ ನಿಜವಾದ ಕಾಡಿನ ರಾಜನಾರು ? ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಕ್ಯಾಪ್ಷನ್‌ ಬರೆದಿದ್ದಾರೆ. Anything is Possible in Wild and Nature (ಪ್ರಕೃತಿಯಲ್ಲಿ ಎಲ್ಲವೂ ಸಾಧ್ಯ) ಎಂಬ ಮಾತಿಗೆ ಕನ್ನಡಿ ಹಿಡಿದಂತಿರುವ ಈ ವೀಡಿಯೋ ನಿಮಗಾಗಿ ಇಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!