ಮುರುಘಾ ಶರಣರ ಮೇಲೆ ಎಫ್ ಐಆರ್ ದಾಖಲಾಗಲ್ಲ: ಸಚಿವ ಉಮೇಶ ಕತ್ತಿ

ಹೊಸದಿಗಂತ ವರದಿ ವಿಜಯಪುರ:
ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶ್ರೀಗಳ ಮೇಲೆ ಎಫ್ ಐಆರ್ ಆಗಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುರುಘಾ ಶ್ರೀಗಳ ಮೇಲೆ ಎಫ್ ಐಆರ್ ಆಗಲ್ಲ. ಆದರೆ ನೋಡೋಣ. ಇದು ಒಳ ಜಗಳವಾಗಿದೆ. ಬಸವರಾಜ್ ಹಾಗೂ ಮುರುಘಾ ಶ್ರೀಗಳ ಜಗಳವಾಗಿದ್ದು, ಇದು ರಾಡಿಯಾಗಿ ಎಲ್ಲೆಲ್ಲೂ ಹೋಗ್ತಾ ಇದೆ ಎಂದರು.ಮುರುಘಾ ಶ್ರೀಗಳ ಮೇಲೆ ಆರೋಪ ಮಾಡಿದ್ದು ತಪ್ಪು. ಶ್ರೀಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಇಂತಹ ಶ್ರೀಗಳ ಮೇಲೆ ಇಲ್ಲಸಲ್ಲದ ಆರೋಪ ಸಲ್ಲದು ಎಂದರು.
ಸಮಾಜವನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಗಬಾರದು. ಜನರನ್ನು ತೊಂದರೆಗೆ ಸಿಕ್ಕಿಸಬಾರದು. ಇನ್ನು ಕೋರ್ಟ್ ಏನು ಕ್ರಮ ತೆಗೆದುಕೊಳ್ಳುತ್ತದೇ ನೋಡೋಣ ಎಂದರು.
ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ‌‌ ನಾಳೆಯೇ ರಾಜಿನಾಮೆ ನೀಡುತ್ತೇನೆ. ನಾಳೆ ಬೆಳಗ್ಗೆ ನಾನು‌ ರಾಜೀನಾಮೆ ಕೊಡಲು ಸಿದ್ದ. ಚಿರತೆ ಸಿಕ್ಕರೆ ನಂದೇನು ತಕರಾರಿಲ್ಲ. ಆದರೆ, ಚಿರತೆ ಹಿಡಿಯಲು‌ ಉತ್ತರ ಕರ್ನಾಟಕ ‌ಭಾಗದ ಸ್ಟಾಫ್ ಹಾಕಿದ್ದೇವೆ.
ಆನೆಗಳನ್ನು‌ ತಂದಿದ್ದೇವೆ.
ಇಲ್ಲಿಯವರೆಗೆ ಚಿರತೆ ಯಾರಿಗೂ ಏನೂ ಮಾಡಿಲ್ಲ, ಚಿರತೆ ಇನ್ನೂ ಸಿಕ್ಕಿಲ್ಲ ಎಂದರು. ಎರಡು ದಿನಗಳಿಂದ ಚಿರತೆ ಕಂಡು ಬಂದಿಲ್ಲ. ಅದು ಬೆಟ್ಟಕ್ಕೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಗೋಲ್ಫ್ ಕೋರ್ಟ್ ಸುತ್ತಮುತ್ತ ತಿರುಗಾಡುತ್ತಿದೆ ಎನ್ನಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!