ಗುಜರಿ ವಸ್ತು ತುಂಬಿದ್ದ ಲಾರಿಗೆ ಬೆಂಕಿ, ಭಾಗಶಃ ಸುಟ್ಟು ಹೋದ ಲಾರಿ

ಹೊಸದಿಗಂತ ವರದಿ ಅಂಕೋಲಾ:

ಹಳೇ ಪ್ಲಾಸ್ಟಿಕ್ ಮತ್ತಿತರ ಗುಜರಿ ವಸ್ತುಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿಗೆ ಬೆಂಕಿ ತಗುಲಿ ಲಾರಿ ಭಾಗಶಃ ಸುಟ್ಟು ಹೋದ ಘಟನೆ ರಾಷ್ಟ್ರೀಯ ಹೆದ್ದಾರಿ 63 ಕಂಚಿನಬಾಗೀಲ್ ಬಳಿ ಸಂಭವಿಸಿದೆ.

ಕೇರಳದ ಕೊಚ್ಚಿಯಿಂದ ಸ್ಥಳೀಯ ಸಂಸ್ಥೆಗಳ ಸಂಗ್ರಹಿತ ತ್ಯಾಜ್ಯ ತುಂಬಿಕೊಂಡು ಕಲಬುರ್ಗಿಗೆ ಹೊರಟಿದ್ದ ಲಾರಿಗೆ ಕಂಚಿನಬಾಗೀಲ್ ಬಳಿ ಬೆಂಕಿ ಹೊತ್ತಿಕೊಂಡಿದ್ದು ಲಾರಿಯ ಮುಂಭಾಗ ಬೆಂಕಿಗೆ ಆಹುತಿಯಾಗಿದ್ದು ಲಾರಿಯಲ್ಲಿ ಲೋಡ್ ಮಾಡಲಾಗಿದ್ದ ವಸ್ತುಗಳು ಕೆಲವು ಪ್ರಮಾಣದಲ್ಲಿ ಬೆಂಕಿಯಲ್ಲಿ ಉರಿದು ಹೋಗಿವೆ.

ಮಾಹಿತಿ ತಿಳಿದ ಅಂಕೋಲಾ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿದ್ದರಿಂದ ಹೆಚ್ಚಿನ ಅನಾಹುತ ನಡೆಯುವುದು ತಪ್ಪಿದಂತಾಗಿದೆ.

ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಲಾರಿಗೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣಗಳು ತಿಳಿದು ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!