ಹೆರಾಯಿನ್‌ ಕಳ್ಳಸಾಗಾಣೆ ಮಾಡುತ್ತಿದ್ದ ಪಾಕ್‌ ಡ್ರೋಣ್‌ ಉಡೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡ್ರೋನ್ ಮೂಲಕ ಮತ್ತೊಂದು ಕಳ್ಳಸಾಗಣೆ ಕೈ ಹಾಕಿದ್ದ ಪಾಕಿಸ್ತಾನದ ಯತ್ನವನ್ನು ಬಿಎಸ್ಎಫ್ ಪಡೆಗಳು ವಿಫಲಗೊಳಿಸಿದೆ. ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್‌ ಗಮನಿಸಿ ಎಚ್ಚೆತ್ತ ಬಿಎಸ್‌ಎಫ್‌ ಪಡೆ ಗುಂಡು ಹಾರಿಸಿ ಕೆಳಗಿಳಿಸಿದ್ದಾರೆ. ಅದರಲ್ಲಿದ್ದ ಒಂಭತ್ತು ಪ್ಯಾಕೆಟ್‌ಗಳಲ್ಲಿದ್ದ ಹೆರಾಯಿನ್‌ ಅನ್ನು ಬಿಎಸ್‌ಎಫ್ ಪಡೆ ವಶಪಡಿಸಿಕೊಂಡಿದೆ.

ಪಂಜಾಬ್‌ನ ಅಮೃತಸರಕ್ಕೆ ಹೆರಾಯಿನ್ ಸಾಗಿಸಲಾಗುತ್ತಿತ್ತು ಎಂದು ಭದ್ರತಾಪಡೆ ಮಾಹಿತಿ ನೀಡಿದ್ದಾರೆ. ಗಡಿಯಾಚೆಯಿಂದ ಪಾಕಿಸ್ತಾನ ಮಾಡುತ್ತಿದ್ದ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದೆ. ಈ ಹಿಂದೆ ಜುಲೈ 2ರಂದು ಸಹ ಗಡಿ ದಾಟುತ್ತಿದ್ದ ಪಾಕ್‌ ಡ್ರೋಣ್‌ವೊಂದನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!