ಮಲ್ಲಪ್ಪ ಬೆಟ್ಟದಲ್ಲಿ ಸೆರೆ ಸಿಕ್ಕಿತು ನರಭಕ್ಷಕ ಚಿರತೆ

ಹೊಸದಿಗಂತ ವರದಿ, ಮೈಸೂರು:

ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ಒಂದೇ ತಿಂಗಳಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಚಿರತೆಯು ಶುಕ್ರವಾರ ತಾಲೂಕಿನ ಎಂ.ಎಲ್.ಹುAಡಿ ಗ್ರಾಮದ ಮಲ್ಲಪ್ಪನ ಬೆಟ್ಟದಲ್ಲಿ ಸೆರೆ ಸಿಕ್ಕಿದೆ.
ಇಂದು ಮುಂಜಾನೆ 4 ಘಂಟೆ ಸಮಯದಲ್ಲಿ ಸೆರೆ ಸಿಕ್ಕ ಚಿರತೆಯನ್ನು ಸುಮಾರು 8 ವರ್ಷಗಳ ಗಂಡು ಚಿರತೆ.ತಾಲೂಕಿನ ಎಂ.ಎಲ್.ಹುAಡಿ ಗ್ರಾಮದ ಮಂಜುನಾಥ್ ಮತ್ತು ಎಸ್.ಕೆಬ್ಬೆಹುಂಡಿಯ ಮೇಘನಾಳನ್ನು ಬಲಿ ತೆಗೆದುಕೊಂಡಿದ್ದ ಚಿರತೆ ಇದೇ ಇರಬಹುದೆಂದು ಹೇಳಲಾಗುತ್ತಿದೆ.
ಎರಡು ದುರ್ಘಟನೆ ನಂತರ ಎಚ್ಚೆತ್ತ ಅರಣ್ಯ ಇಲಾಖೆಯು ಡಿ.2 ನಂತರ ನುರಿತ 4 ತಂಡಗಳನ್ನು ಬಳಸಿಕೊಂಡು ಚಿರತೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದು,ಚಿರತೆ ಸೆರೆಗಾಗಿ ಮಲ್ಲಪ್ಪ ಬೆಟ್ಟದ ಹಲವು ಕಡೆ ಬೋನುಗಳನ್ನು ಇಡಲಾಗಿತ್ತು .
ಅಲ್ಲದೆ ಚಿರತೆಯ ಚಲನವಲನ ಗುರುತಿಸಲು 30 ಆಧುನಿಕ ಥರ್ಮಲ್ ಡ್ರೋಣ್ ಕ್ಯಾಮೆರಾ ಬಳಸಲಾಗಿದ್ದು,ಹಲವು ದಿನಗಳಿಂದಲೂ ಕ್ಯಾಮೆರಾ ಮುಖೇನ ಚಿರತೆ ಓಡಾಟವನ್ನು ಅರಣ್ಯ ಇಲಾಖೆಯು ಗಮನಿಸಿತ್ತು .
ಇಂದು ಚಿರತೆ ಸಿಕ್ಕಿರುವುದರಿಂದ ಸುತ್ತಮುತ್ತಲ ಗ್ರಾಮದ ಜನರು ನಿರುಮ್ಮಳರಾಗಿದ್ದು,ಸೆರೆ ಸಿಕ್ಕಿರುವ ಚಿರತೆ ನೋಡಲು ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸಾಗಿಸಲು ತುಂಬಾ ಕಷ್ಟಪಡಬೇಕಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕರು:
ಚಿರತೆ ಸೆರೆ ಸಿಕ್ಕ ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಶಾಸಕ ಎಂ.ಅಶ್ವಿನ್ ಕುಮಾರ್,ನರಹಂತಕ ಚಿರತೆ ಸೆರೆ ಸಿಕ್ಕಿದ್ದು ,ನರಹಂತಕ ಚಿರತೆ ಇದೇ ಇರಬಹುದೆಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ತಾಲೂಕಿನ ಹಲೆವೆಡೆ ಚಿರತೆ ಹಾವಳಿ ಹೆಚ್ಚಾಗಿದ್ದು,ಶೀಘ್ರ ಚಿರತೆಗಳನ್ನು ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿದರು.
ಸ್ಥಳದಲ್ಲಿ ಸಿಎಫ್ ಮಾಲತಿ ಪ್ರಿಯ,ಡಿಸಿಎ
ಎಫ್ ಕಮಲ ಕರಿಕಾಳನ್,ಎಸಿಎಫ್ ಲಕ್ಷೀಕಾಂತ್,ಸಮಾಜ ವಲಯ ಅರಣ್ಯಾಧಿಕಾರಿ ರಾಜೇಶ್,ಅರಣ್ಯ ಅಧಿಕಾರಿ ಯಮುನಾ ,ಮಂಜುನಾಥ್,ಉಮೇಶ್,ಸರ್ಕಲ್ ಇನ್ಸೆ÷್ಪಕ್ಟರ್ ಲೋಲಾಕ್ಷಿ ಇತರರು ಹಾಜರಿದ್ದರು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!