ಹೊಸದಿಗಂತ ಡಿಜಿಟಲ್ ಡೆಸ್ಕ್
ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ‘ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ’, ವಿಜ್ಞಾನ, ತಂತ್ರಜ್ಞಾನ, ಮಾಹಿತಿ, ಕೌಶಲ್ಯಾಭಿವೃದ್ಧಿ, ಶಿಕ್ಷಣ, ಸಾಹಸ, ಮನೋರಂಜನೆ ಮೇಳೈಸುತ್ತಿದ್ದು, ಈ ಸಂಭ್ರಮಕ್ಕೆ ಭಾರತೀಯ ಅಂಚೆ ಇಲಾಖೆಯು ಸಾಥ್ ನೀಡಿದೆ.
ಜಾಂಬೂರಿಯ ಕಾರ್ಯಕ್ರಮವನ್ನು ಇನ್ನಷ್ಟು ಅವಿಸ್ಮರಣೀಯ ವನ್ನಾಗಿಸಲು ವಿಶೇಷ ಅಂಚೆ ಲಕೋಟೆಯೊಂದನ್ನು ಹೊರತಂದಿದೆ. ಜಾಂಬೂರಿಯ ಲಾಂಛನ ಹೊಂದಿದ ಈ ಲಕೋಟೆಯ ಬೆಲೆ 20 ರೂಪಾಯಿಗಳು.
ಜಾಂಬೂರಿಯ ಮಹತ್ವ ತಿಳಿಸುವ ಪುಟ್ಟ ಬರಹ ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ನೀಡಲಾಗಿದೆ. ಲಕೋಟೆಯ ಹಿಂಭಾಗದಲ್ಲಿರುವ ‘ಕ್ಯೂ ಆರ್’ ಕೋಡ್ ಸ್ಕಾನ್ ಮಾಡಿದರೆ ಜಾಂಬೂರಿಯ ಅಧಿಕೃತ ಮಾಹಿತಿ ವೆಬ್‌ಸೈಟ್ ಮೂಲಕ ಸಮಗ್ರ ಮಾಹಿತಿ ಲಭ್ಯವಾಗುತ್ತದೆ.
ದೇಶೀಯ ಸಂಸ್ಕೃತಿಯ ಅನಾವರಣದ ಜೊತೆಗೆ ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಚಿತ್ರವನ್ನೊಳಗೊಂಡ ವಿಶೇಷ ಅಂಚೆ ಲಕೋಟೆ ಸುಂದರವಾಗಿ ಮೂಡಿಬಂದಿದೆ.