Wednesday, December 6, 2023

Latest Posts

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ

ಹೊಸದಿಗಂತ ವರದಿ, ಹುಬ್ಬಳ್ಳಿ:
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣ ಹಳೇ ಹುಬ್ಬಳ್ಳಿ ಕಟಗರ ಓಣಿ ಸದರ ಸೋಪಾದ ಹತ್ತಿರ ಶನಿವಾರ ತಡರಾತ್ರಿ ನಡೆದಿದೆ.
ಹಳೇ ಹುಬ್ಬಳ್ಳಿ ಮುಸ್ತಫಾಸೋಪಾ ನಿವಾಸಿ ಮಹ್ಮದ ಜಾಫರ್ ದಡೆಸೂರ ಮೃತಪಟ್ಟ ವ್ಯಕ್ತಿ. ಶಾಬಾದ್ ಸೇರಿ ಇನ್ನಿಬ್ಬರು ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ಈ ಹಿಂದೆ ಮಹ್ಮದ್ ಜಾಫರ್ ಕುಡಿದ ನಿಶೆಯಲ್ಲಿ ಶಾಬಾದ್ ಜೊತೆ ಜಗಳವಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಈ ದ್ವೇಷವನ್ನು ಮನಸ್ಸಿನಲ್ಲೇ ಇರಿಸಿಕೊಂಡಿದ್ದ ಶಬಾದ್ ಅವನೊಂದಿಗೆ ಶನಿವಾರ ಮತ್ತೆ ತಂಟೆ ತೆಗೆದಿದ್ದಾನೆ. ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ‌ ಚಕಮುಖಿ ನಡೆದು ಸಿಟ್ಟಿನಲ್ಲಿ ತನ್ನ ಹತ್ತಿರವಿದ್ದ ಚಾಕುವಿನಿಂದ ತೊಡೆಯ ಭಾಗಕ್ಕೆ‌ ಇರಿದಿದ್ದಾನೆ. ಇದರಿಂದ ಗಂಭೀರ ವಾಗಿ ಗಾಯಗೊಂಡ ಮಹ್ಮದ ಜಾಫರ್ ಆಸ್ಪತ್ರೆ ರವಾಣಿಸುವಾಗ ರಸ್ತೆ ಮಧ್ಯೆ ಮೃತ ಪಟ್ಟಿದ್ದಾನೆ. ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!