ಹೊಸದಿಗಂತ ವರದಿ ಹುಬ್ಬಳ್ಳಿ:
ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನ. 20 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಧ್ಯಾಕ್ಷ ವಾಸುದೇವ ಮೇಟಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಇಲ್ಲಿಯ ಸ್ಟೇಶನ್ ರಸ್ತೆ ಬಿ.ಆರ್. ಅಂಬೇಡ್ಕರ್ ಪುತ್ಥಳಿಯಿಂದ ರಾಣಿ ಚನ್ನಮ್ಮ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, 30 ಜಿಲ್ಲೆಯ 5 ಸಾವಿರ ರೈತರು ಹಾಗೂ ಸಕಲ ವಾದ್ಯ ಮೇಳ ಭಾಗಹಿಸಲಿದ್ದಾರೆ ಎಂದರು.
ಈ ಭಾಗದ ನೀರಾವರಿ ಯೋಜನೆಗಳಾದ ಮಹದಾಯಿ, ಕಳಸಾ, ಬಂಡೂರಿ ಜಾರಿ, ಬೆಣ್ಣೆ ಹಳ್ಳ ಯೋಜನೆ ನೀರನ್ನು ರೈತರಿಗೆ ಸದುಪಯೋಗುವಂತೆ ಮಾಡಬೇಕು, ಕೃಷ್ಣ ನದಿಗೆ ಆಲಮಟ್ಟಿ ಡ್ಯಾಂ ಜಲಾಶಯ 519ರಿಂದ 524,526 ಕ್ಕೆ ಎತ್ತರಿಸಲು ತ್ವರಿತವಾಗಿ ಸರಕಾರ ಮುಂದಾಗಬೇಕು, ನವಲಿ ಜಲಾಶಯ ನಿರ್ಮಾಣ ಮಾಡಬೇಕು, ಬರಗಾಲವಿದ್ದು ರೈತರ ಸಂಪೂರ್ಣ ಸಾಲಾ ಮನ್ನಾ ಹಾಗೂ ಬೆಳೆ ಪರಿಹಾರ, ಬೆಳೆವಿಮೆ, ರೈತರ ಬೆಳೆಗೆ ಕಾನೂನಾತ್ಮಕ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಲಾಗುವುದು ಎಂದರು.
ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಮಾಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಭರವಸೆ ನೀಡಿದ್ದು, ಮಾತು ತಪ್ಪಿದ್ದಾರೆ. ಸರ್ಕಾರ ತಕ್ಷಣ ಯೋಜನೆ ಜಾರಿಗೊಳಿಸಬೇಕು. ರೈತರಿಗೆ 12 ಗಂಟೆ ವಿದ್ಯುತ್ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುನ್ನೂರ, ಬಿ.ಎಸ್. ಬೆಳ್ಳಿಗಟ್ಟಿ, ಚಂದ್ರಕಾಂತ ಕಟಗಿ,ಅನ್ನಪೂರ್ಣ ಪಾಟೀಲ ಇದ್ದರು.