ನಾಯಕಿಯಿಲ್ಲದೆ ʻಚಿರುʼಗಿದು ಮೊದಲ ಸಿನಿಮಾ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಗಾಸ್ಟಾರ್ ಚಿರಂಜೀವಿ ನಟಿಸಿದ ‘ಆಚಾರ್ಯ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರಕ್ಕೆ ಇಂಡಸ್ಟ್ರಿ ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕೂಡ ನಟಿಸಿದ್ದು, ಆಚಾರ್ಯ ಮಲ್ಟಿಸ್ಟಾರರ್ ಸಿನಿಮಾವಾಗಿ ಪ್ರೇಕ್ಷಕರನ್ನು ರಂಜಿಸುವುದಂತೂ ಖಚಿತ ಅಂತಿದಾರೆ ಪ್ರೇಕ್ಷಕರು.

ಚಿರಂಜೀವಿ ಖಾತೆಯಲ್ಲಿ ಆಚಾರ್ಯ ಜೊತೆ ಒಟ್ಟು ಐದು ಚಿತ್ರಗಳು ಸಾಲಿನಲ್ಲಿವೆ. ತಮ್ಮ ಕೆರಿಯರ್‌ನಲ್ಲಿ ಇದುವರೆಗೆ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಮಾಡಿದ್ದಾರೆ. ಹಲವು ಮೈಲಿಗಲ್ಲುಗಳನ್ನು ಮೀರಿಸಿರುವ ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಾಯಕಿ ಇಲ್ಲದೆ ಸಿನಿಮಾ ಮಾಡಿರುವುದು ಮೆಗಾ ಅಭಿಮಾನಿಗಳಿಗೆ ಶಾಕಿಂಗ್ ಸತ್ಯ.

ಆಚಾರ್ಯ ಸಿನಿಮಾಗೆ ಈ ಹಿಂದೆ ಕಾಜಲ್ ಅಗರ್ವಾಲ್ ಅವರನ್ನು ಚಿತ್ರದಲ್ಲಿ ಚಿರುಗೆ ಜೋಡಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಅತ್ಯಲ್ಪ ಪಾತ್ರಕ್ಕಾಗಿ ಕಾಜಲ್‌ನಂತಹ ನಾಯಕಿಯನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ಆ ಪಾತ್ರವನ್ನು ಕೈ ಬಿಟ್ಟಿದ್ದಾರೆ. ಇದೀಗ ಮೆಗಾಸ್ಟಾರ್‌ನಂತಹ ದೊಡ್ಡ ಸ್ಟಾರ್‌ಗೆ ನಾಯಕಿ ಕೊರತೆಯ ಬಗ್ಗೆ ಅಭಿಮಾನಿಗಳು ಸ್ವಲ್ಪ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿನಿಮಾ ನೋಡಿದ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದು ಗೊತ್ತಾಗಬೇಕಾದರೆ ಸಿನಿಮಾ ರಿಲೀಸ್ ವರೆಗೂ ಕಾಯಲೇಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!