ಏ. 30ರಂದು ದೆಹಲಿಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ: ಕಾನೂನಿನ ವಿಚಾರ ಚರ್ಚೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಏ. 30 ರಂದು ಚೀಫ್ ಮಿನಿಸ್ಟರ್ ಮತ್ತು ಚೀಫ್ ಗೆಸ್ಟಿಸ್ ಸಮ್ಮೇಳನ‌ವಿರುವ ಕಾರಣದಿಂದಾಗಿ,  ಏ.29 ರಂದು ದೆಹಲಿಗೆ ಹೋಗುತ್ತಿದ್ದೇನೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. ಪ್ರಧಾನಿ ಮಂತ್ರಿ ಉದ್ಘಾಟಿಸಲಿದ್ದು, ಹಲವಾರು ಕಾನೂನು ವಿಚಾರ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲಿಯೂ ಕೋಮುಗಲಭೆ ಸೃಷ್ಟಿಸುವ ಪ್ರಚೋದನಾ ಭಾಷಣಗಳ ಕೆಲವರು ಮಾಡುತ್ತಿದ್ದಾರೆ. ವಿಶೇಷವಾಗಿ ಸಾಮಾಜಿಕ‌ ಜಾಲತಾಣದಲ್ಲಿ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಮಿತಿ ರಚನೆಯ ‌ಮಾಡುತ್ತೇವೆ.‌ ಅದರ ಆದೇಶದಂತೆ ನಿಯಮಗಳನ್ನು ಪಾಲನೆ‌ ಮಾಡುತ್ತೇವೆ ಎಂದರು.

ಕೋವಿಡ್ ನಾಲ್ಕನೇ ಅಲೆ ಇನ್ನು ಬಂದಿಲ್ಲ. ರಾಜ್ಯದಲ್ಲಿ ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿದೆ. ಅದನ್ನು ಗಮನಿಸುತ್ತಿದ್ದೇವೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಯೂರೋಪ್ ಮತ್ತಿತರ ದೇಶಗಳಲ್ಲಿ ಲಸಿಕೆ ಪಡೆಯದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಶೇ. 98 ರಷ್ಟು ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಬೂಸ್ಟರ್ ಮತ್ತು ಮುಂಜಾಗೃತ ಲಸಿಕೆ ಇನ್ನಷ್ಟು ಜನರಿಗೆ ನೀಡಬೇಕಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ 6 ವರ್ಷದಿಂದ 12 ವರ್ಷದ ಮಕ್ಕಳಿಗೆ ಲಸಿಕೆ‌ ಆರಂಭಿಸಿದೆ. ಅದರ ಪ್ರಕಾರ ರಾಜ್ಯದ ಮಕ್ಕಳಿಗೂ ನೀಡಲು ತಯಾರಿ ನಡೆಸಲಾಗಿದೆ. ಕೊರೋನಾ ನಿಯಮಗಳಾದ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೋನಾ ಪರೀಕ್ಷೆ ಜಾಸ್ತಿ ಮಾಡಲಾಗುತ್ತಿದೆ. ಅದರಲ್ಲಿ ಸೋಂಕು ಕಂಡು ಬಂದವರಿಗೆ ಜಿನೋಮ್ ಪರೀಕ್ಷೆ‌ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಸುದೀಪ್ ಹೇಳಿದ್ದು ಸರಿ ಇದೆ:

ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾದ ಮೇಲೆ ಮಾತೃ ಭಾಷೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಆ ರಾಜ್ಯದಲ್ಲಿ ಅದೇ ಸಾರ್ವಭೌಮವಾಗಿದೆ. ಅದೇ ವಿಚಾರ ಸುದೀಪ್ ಹೇಳಿದ್ದಾರೆ. ಇದಕ್ಕೆ ಎಲ್ಲರು ಗೌರವಿಸಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!