Friday, June 2, 2023

Latest Posts

ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆ, ಕಲ್ಲಿನಿಂದ ಜಜ್ಜಿ ಭೀಕರ ಕೊಲೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಕಾಣೆಯಾಗಿದ್ದ ಬಾಲಕನೋರ್ವ ಶುಕ್ರವಾರ ಮಧ್ಯಹ್ನ 12 ಗಂಟೆ ಸುಮಾರಿಗೆ ಮಿಲತ್ ನಗರದ‌ ದೊಡ್ಡಮನಿ(ಮಿರ್ಚಿ) ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಭೈರಿದೇವರಕೊಪ್ಪದ ನದೀಮ್ ಹುಬ್ಬಳ್ಳಿ(8) ಮೃತಪಟ್ಟ ಬಾಲಕ. ಬಾಲಕ‌ ಮೃತ ದೇಹದ ಮೇಲೆ ಕೆಲ ಗಾಯಗಳಾಗಿದ್ದು, ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಗುರುವಾರ ಮೈದಾನಕ್ಕೆ ಹೋದ ಸಾರ್ವಜನಿಕರು ಶವವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ನೀಡಿದ ಬೆಂಡಿಗೇರಿ ಪೊಲೀಸ ಪರಿಶೀಲನೆ ನಡೆಸಿದ್ದಾರೆ.

ಗುರುವಾರ ರಾತ್ರಿ ಮಗ ಮನೆಗೆ ಬಂದಿಲ್ಲ ಎಂದು ಮೃತ ಬಾಲಕ ಕುಟುಂಬದವರು ಎಲ್ಲ ಕಡೆ ಹುಡುಕಾಡಿದ್ದಾರೆ. ಅಷ್ಟೇ ಅಲ್ಲದೇ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರ ಸಹ ನೀಡಿದ್ದರು. ಪೊಲೀಸರು ದೂರಿನ ಅನ್ವಯ ಬಾಲಕನ ಶೋಧದಲ್ಲಿ ತೊಡಗಿದ್ದರು. ಮೃತಪಟ್ಟ ನದೀಮ್ ಕಳೆದ ಎರಡು‌ ದಿನ ಹಿಂದೆ ಬೆಂಡಿಗೇರಿಯಲ್ಲಿರುವ ಅಜ್ಜಿಯ ಮನೆಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಮೃತಪಟ್ಟ ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!