Friday, June 9, 2023

Latest Posts

ಶಾಸಕರನ್ನ ತಮ್ಮ ಪಕ್ಷದತ್ತ ಸೆಳೆಯುವ ಡಿಕೆಶಿ ತಂತ್ರಕ್ಕೆ‌ ಸಚಿವ ಸುನೀಲ್‌ ಕುಮಾರ್ ಟಾಂಗ್

ಹೊಸದಿಗಂತ ವರದಿ ಶಿರಸಿ: 

ಪಕ್ಷದಲ್ಲಿ ಅಭದ್ರತೆ ಇದ್ದವರು ಬೇರೆ ಪಕ್ಷದಲದಲ್ಲಿದ್ದವರನ್ನು ಕರೆಯುತ್ತಾರೆ. ಭದ್ರತೆ ಇದ್ದವರು ಕರೆಯೋದಿಲ್ಲ ಎನ್ನುವ ಮೂಲಕ ಬಿಜೆಪಿ ಶಾಸಕರನ್ನ ಡಿಕೆ ಶಿವಕುಮಾರ್ ತಮ್ಮ ಪಕ್ಷದತ್ತ ಸೆಳೆಯುವ ತಂತ್ರಕ್ಕೆ ಟಾಂಗ್ ಇಂಧನ ಸಚಿವ ಸುನೀಲ್‌ ಕುಮಾರ್ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಕಾರ್ಯಕ್ರಮಕ್ಕೆ ಆಗಮಿಸಿ ಸ್ಪೀಕರ್‌ ಕಾಗೇರಿ ಅವರ ಕಚೇರಿಗೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಅಭದ್ರತೆ ಕಾಣುತ್ತಿದೆ. ಅದಕ್ಕೆ ಬೇರೆಯವರನ್ನ ಕರೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಚುನಾವಣೆ ಸ್ಪರ್ಧಿಸಲು ಕ್ಷೇತ್ರವಿಲ್ಲದೇ ಬೇರೆ ಬೇರೆ ಕಡೆ ಅಲೆದಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅಭದ್ರತೆ, ಅಸ್ತಿತ್ವಕ್ಕಾಗಿ ಹೋರಾಟ ಎಲ್ಲವೂ ಅವರ ಪಾರ್ಟಿಯಲ್ಲೇ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು.

ನಾವು ಖುಷಿಯಿಂದ ರಾಜ್ಯಾದ್ಯಂತ ಸಂಕಲ್ಪ ಯಾತ್ರೆ ಮುಗಿಸಿದ್ದೇವೆ. ಮುಂದಿ‌ನ ದಿನಗಳಲ್ಲಿ ಸಂಪೂರ್ಣ ಬಹು ಮತದದೊಂದಿಗೆ ಸರ್ಕಾರ ರಚನೆಗೆ ಚಿಂತನೆ ನಡೆಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜವಾಬ್ದಾರಿಯುತ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸಭೆ ನಡೆಸಾಲಗಿದೆ. ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡಿ ರಾಜ್ಯ ಕಮೀಟಿಗೆ ಕಳುಹಿಸಲಾಗುತ್ತದೆ. ಟಿಕೆಟ್‌ ನೀಡುವ ವೇಳೆಗೆ ಕಾರ್ಯಕರ್ತರ ಅಭಿಪ್ರಾಯವೂ ಕೂಡ ಮಾನದಂಡವಾಗಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!