Friday, June 2, 2023

Latest Posts

ಕಲಾ ಕ್ಷೇತ್ರದಲ್ಲಿ ಅಂಬಾನಿ ಹೊಸ ಪ್ರಯಾಣ: ಇಂದಿನಿಂದ ಕಾರ್ಯಾರಂಭಗೊಳ್ಳಲಿದೆ ಸಾಂಸ್ಕೃತಿಕ ಕೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವದ ಅತ್ಯಂತ ಶ್ರೀಮಂತರ ಉದ್ಯಮಿಗಳ ಸಾಲಿನಲ್ಲಿರುವ ಮುಕೇಶ್‌ ಅಂಬಾನಿ ಅವರ ಕುಟುಂಬದಿಂದ ಇದೀಗ ಕಲಾ ಕ್ಷೇತ್ರದಲ್ಲಿ ಹೊಸದೊಂದು ಪ್ರಯಾಣ ಆರಂಭವಾಗಲಿದ್ದು ಇಂದಿನಿಂದ (ಮಾ.31) ನೀತಾ ಮುಕೇಶ್‌ ಅಂಬಾನಿ ಸಾಂಸ್ಕೃತಿಕ ಕೇಂದ್ರ ಕಾರ್ಯಾರಂಭಗೊಳ್ಳಲಿದ್ದು ಕಲಾವಿದರಿಗೆ ತನ್ನ ಬಾಗಿಲು ತೆಗೆಯಲು ಸಿದ್ಧವಾಗಿದೆ. ವಿಶ್ವದರ್ಜೆಯ ಸಾಂಸ್ಕೃತಿಕ ಕೇಂದ್ರ ಇದಾಗಿದ್ದು ಭಾರತದ ಕಲಾ ಶ್ರೀಮಂತಿಕೆಯನ್ನು ಜಗತ್ತಿಗೇ ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಭಾರತದ ಸಂಗೀತ, ರಂಗಭೂಮಿ, ಲಲಿತಕಲೆ ಮತ್ತು ಕರಕುಶಲ ವಸ್ತುಗಳನ್ನು ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಈ ಸಾಂಸ್ಕೃತಿಕ ಕೇಂದ್ರ ಸಹಾಯಕವಾಗಲಿದೆ. ಬರೋಬ್ಬರಿ 2 ಸಾವಿರ ಆಸನಗಳ ಬೃಹತ್‌ ರಂಗಮಂದಿರ ಈ ಸಾಂಸ್ಕೃತಿಕ ಕೇಂದ್ರದಲ್ಲಿದ್ದು ಅತ್ಯುನ್ನತ ತಂತ್ರಜ್ಞಾನಗಳಿರುವ 250-ಆಸನಗಳ ಸ್ಟುಡಿಯೋ ಥಿಯೇಟರ್, ಮತ್ತು ಡೈನಾಮಿಕ್ 125-ಸೀಟ್ ಕ್ಯೂಬ್ ಗಳನ್ನು ಒಳಗೊಂಡಿದೆ. ಅಲ್ಲದೇ ನಾಲ್ಕು ಅಂತಸ್ತಿನ ಆರ್ಟ್ ಹೌಸ್ ಅನ್ನು ಸಹ ಒಳಗೊಂಡಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಜಿಯೋ ವರ್ಲ್ಡ್ ಸೆಂಟರ್‌ ಭಾಗವಾಗಿ ಇದು ಉದ್ಘಾಟನೆಗೊಳ್ಳಲಿದೆ.

ಶಾಲಾ – ಕಾಲೇಜುಗಳಲ್ಲಿ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳ ಆಯೋಜನೆ, ಕಲಾ ಶಿಕ್ಷಕರಿಗೆ ಪುರಸ್ಕಾರ, ವಸತಿಸಹಿತ ಕಲಾ ಶಿಕ್ಷಣ, ವಯಸ್ಕರಿಗೆ ಕಲೆ ಸಾಕ್ಷರತಾ ಕಾರ್ಯಕ್ರಮಗಳು ಮುಂತಾದವುಗಳ ಮೂಲಕ ಭಾರತದ ಸಾಂಸ್ಕೃತಿಕ ಮೂಲಸೌಕರ್ಯ ಬಲಪಡಿಸುವುದರಲ್ಲಿ ಹಾಗೂ ಅವುಗಳನ್ನು ಪ್ರಚುರ ಪಡಿಸುವಲ್ಲಿ ಈ ಸಾಂಸ್ಕೃತಿಕ ಕೇಂದ್ರ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಲಿದೆ. ಭಾರತದ ಅದ್ಭುತ ಪ್ರತಿಭೆಗಳಾದ ಫಿರೋಜ್ ಅಬ್ಬಾಸ್ ಖಾನ್, ಅಜಯ್- ಅತುಲ್, ಮಯೂರಿ ಉಪಾಧ್ಯ, ವೈಭವಿ ಮರ್ಚೆಂಟ್ ಮುಂತಾದ ದಿಗ್ಗಜರು ಆರಂಭಿಕವಾಗಿ ಈ ಕಲಾಕೇಂದ್ರದಲ್ಲಿ ಪ್ರದರ್ಶನ ನೀಡಲಿದ್ದಾರೆ. ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗು ವಿಕಲ ಚೇತನರಿಗೆ ಈ ಕಲಾಕೇಂದ್ರಕ್ಕೆ ಉಚಿತ ಪ್ರವೇಶವಿರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!