ಸ್ವಂತ ಮಗನನ್ನೇ ಕೊಂದು ಬೇಯಿಸಿ ತಿಂದ ತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಹಿಂದೆ ಒಂದು ಮಾತಿತ್ತು. ಅದೇನೆಂದರೆ ಪ್ರಪಂಚದಲ್ಲಿ ಕೆಟ್ಟ ತಂದೆ ಸಿಗಬಹುದು, ಆದರೆ ಕೆಟ್ಟ ತಾಯಿ ಸಿಗುವುದಕ್ಕೆ ಸಾಧ್ಯವಿಲ್ಲ ಎಂದು. ಆದ್ರೆ ಕಾಲ ಬಲಾಗುತ್ತಿದೆ.

ಹೆತ್ತ ತಾಯಿ ಕೂಡ ಕ್ರೂರಿಯಾಗಿ ಇಂದು ವರ್ತಿಸುತ್ತಾಳೆ. ಅದಕ್ಕೆ ಸಾಕ್ಷಿ ಎನ್ನುವಂತೆ ಹೆತ್ತ ತಾಯಿಯೇ ತನ್ನ ಐದು ವರ್ಷದ ಮಗನನ್ನು ಕೊಂದು, ಬೇಯಿಸಿ ತಿಂದಿರುವುದು.

ಹೌದು, ಈ ಘಟನೆ ಈಜಿಪ್ಟ್‌ನ ಫಾಕೊಸ್‌ ಸೆಂಟರ್‌ ಬಳಿಯ ಹಳ್ಳಿಯೊಂದರಲ್ಲಿ ನಡೆದಿದೆ. ಹನಾ (29) ಹೆಸರಿನ ಮಹಿಳೆ ಮೂರು ವರ್ಷಗಳ ಹಿಂದೆ ಗಂಡನಿಂದ ದೂರವಾಗಿದ್ದು, ಹಳ್ಳಿಯಲ್ಲಿ ಐದು ವರ್ಷದ ಮಗನೊಂದಿಗೆ ಜೀವನ ನಡೆಸುತ್ತಿದ್ದಳು. ಆಕೆ ಇತ್ತೀಚೆಗೆ ತನ್ನ ಜತೆ ಇದ್ದ ಏಕೈಕ ಮಗನನ್ನು ಕೊಂದಿದ್ದಾಳೆ. ಬಳಿಕ ಮಗನ ದೇಹವನ್ನು ಬೇಯಿಸಿದ್ದಾಳೆ. ಬಳಿಕ ಶವದ ತಲೆಯ ಭಾಗವನ್ನು ತಿಂದಿದ್ದಾಳೆ.

ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವಿಚಾರ ತಿಳಿದುಬಂದಿದೆ. ಮಗನ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ನಡೆಸಲು ಸೂಚಿಸಲಾಗಿದೆ.
ಈ ವಿಶೇಷ ಪ್ರಕರಣದ ಸುದ್ದಿ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಪೊಲೀಸರು ಆಕೆಯ ಮನೆಗೆ ಹೋಗಿ ಪರಿಶೀಲನೆ ಮಾಡಿದಾಗ ಮಗನ ದೇಹವನ್ನು ಬಕೆಟ್‌ ಒಂದರಲ್ಲಿ ತುಂಬಿಟ್ಟಿರುವುದು ಕಂಡುಬಂದಿದೆ. ತಕ್ಷಣ ಹನಾರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ. ಆಗ ಆಕೆ ತನ್ನ ಮಗನನ್ನು ತಾನೇ ಕೊಂದು, ಬೇಯಿಸಿ ತಿಂದಿದ್ದಾಗಿ ಹೇಳಿದ್ದಾಳೆ. ತಲೆ ಭಾಗವನ್ನು ತಿಂದರೆ ಮಗ ಶಾಶ್ವತವಾಗಿ ತನ್ನೊಂದಿಗೇ ಇರುತ್ತಾನೆ ಎಂದು ಭಾವಿಸಿ ಆಕೆ ಆ ರೀತಿಯಲ್ಲಿ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!